ರಾಷ್ಟ್ರೀಯ

ಅಶ್ಲೀಲ ವಿಡಿಯೊ ವೀಕ್ಷಿಸಿ 5 ಬಾಲಕರಿಂದ 8ರ ಬಾಲಕಿಯ ಮೇಲೆ ಅತ್ಯಾಚಾರ

Pinterest LinkedIn Tumblr


ಡೆಹರಾಡೂನ್: ಮೊಬೈಲ್ ಫೋನ್ ನಲ್ಲಿ ಪೋರ್ನ್‌(ಅಶ್ಲೀಲ) ವಿಡಿಯೊಗಳನ್ನು ನೋಡಿ ನೆರಮನೆಯಲ್ಲಿ ವಾಸವಾಗಿದ್ದ ೮ ವರ್ಷದ ಬಾಲಕಿಯ ಮೇಲೆ ೯ ರಿಂದ ೧೪ವರ್ಷದೊಳಗಿನ ಐದು ಬಾಲಕರು ಅತ್ಯಾಚಾರ ಎಸೆಗಿರುವ ಘಟನೆ ಬೆಳಕಿಗೆ ಬಂದಿದೆ.

ಸಹ್ಸಾಪುರದಲ್ಲಿ ಈ ಘಟನೆ ನಡೆದ್ದಿದ್ದು, ಪೊಲೀಸರು ಬಾಲಕರನ್ನು ಬಂಧಿಸಿ, ಬಾಲಾಪರಾಧಿಗಳ ತಿದ್ದುಪಡಿ ಗೃಹಕ್ಕೆ ಕಳುಹಿಸಿದ್ದಾರೆ.

ಘಟನೆ ಸಂಭವಿಸುವ ಎರಡು ದಿನಗಳ ಹಿಂದೆ ಮೊಬೈಲ್ ನಲ್ಲಿ ಪೋರ್ನ್ ವಿಡಿಯೋ ನೋಡಿದ ಬಳಿಕ ಇಂತಹ ಕೃತ್ಯವೆಸಗಲು ಯೋಜನೆ ರೂಪಿಸಿದ್ದರು. ’ಮುಂಜಾನೆ ಬಾಲಕಿ ಮನೆಯಲ್ಲಿ ಏಕಾಂಗಿಯಾಗಿರುತ್ತಾಳೆ ಎಂದು ತಿಳಿದಿದ್ದ ಬಾಲಕರು, ಕೆಲವು ದಿನಗಳ ಹಿಂದೆಯೇ ಈ ಕೃತ್ಯವೆಸಗಲು ಸಂಚು ರೂಪಿಸಿದ್ದರು. ಅವರನ್ನು ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾನೂನಿನಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ನರೇಶ್‌ ರಾಥೋಡ್ ತಿಳಿಸಿದರು.

Comments are closed.