ನವದೆಹಲಿ: ತೆಲುಗು ದೇಶಂ ಪಕ್ಷ ಎನ್ಡಿಎ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಲಾಪದೊಳಗೆ ಕಣ್ಣೊಡೆದು ಸುದ್ದಿಯಾಗಿದ್ದಾರೆ.
ಹೌದು, ರಾಹುಲ್ ಗಾಂಧಿ ಕಲಾಪದೊಳಗೆ ಕಣ್ಣೊಡೆದದ್ದು ಯಾರಿಗೆ, ಏಕೆ ಕಣ್ಣೊಡೆದರು ಎಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಯಾಗುತ್ತಿದೆ. ಜತೆಗೆ ಕಣ್ಸನ್ನೆಯ ಹುಡುಗಿ ಪ್ರಿಯಾ ವಾರಿಯರ್ ಜತೆಗೆ ರಾಹುಲ್ನನ್ನು ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ.
ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಎನ್ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ತಮ್ಮ ಭಾಷಣದ ಕೊನೆಯಲ್ಲಿ ತಮ್ಮ ವಿರುದ್ಧ ಬಿಜೆಪಿ ನಾಯಕರು ನಡೆಸುವ “ಪಪ್ಪು” ಎಂಬ ಅಪಪ್ರಚಾರವನ್ನೂ ಮೋದಿ ಅವರ ವಿರುದ್ಧದ ಟೀಕೆಗೆ ಬಳಿಸಿಕೊಂಡ ರಾಹುಲ್ ” ನೀವು ನನ್ನನ್ನು ಗೇಲಿ ಮಾಡಬಹುದು.
ನನ್ನ ಮೇಲೆ ನಿಮಗೆ ದ್ವೇಷವಿರಬಹುದು. ಅದಕ್ಕಾಗಿಯೇ ನೀವು ನನಗೆ “ಪಪ್ಪು” ಎಂದು ಕುಹಕವಾಡುತ್ತೀರಿ. ಆದರೆ, ನನಗೆ ನಿಮ್ಮ ಮೇಲೆ ಆ ರೀತಿಯ ದ್ವೇಷವಿಲ್ಲ,” ಎಂದು ಹೇಳಿ ಅವರು ಪ್ರಧಾನಿ ಬಳಿಗೆ ತೆರಳಿ ಅಪ್ಪಿಕೊಂಡರು. ಮೋದಿ ಅವರೂ ರಾಹುಲ್ ಅವರನ್ನು ಮತ್ತೊಮ್ಮೆ ಕರೆದು ಅಪ್ಪಿಕೊಂಡರು.
Comments are closed.