ರಾಷ್ಟ್ರೀಯ

ದೇಶದ ಉತ್ತಮ ಆಡಳಿತದಲ್ಲಿ ಕೇರಳ ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ?

Pinterest LinkedIn Tumblr


ಬೆಂಗಳೂರು: ಭಾರತ ದೇಶದ ಉತ್ತಮ ಆಡಳಿತದಲ್ಲಿ ಕೇರಳ ಸರ್ಕಾರ ಮೊದಲ ಸ್ಥಾನ ಪಡೆದಿದೆ. ಬಿಹಾರ ಸರ್ಕಾರ ಕೊನೆಯ ಸ್ಥಾನ ಪಡೆದಿದೆ ಎಂದು ಥಿಕ್​ ಟ್ಯಾಂಕ್​ ಪಬ್ಲಿಕ್​ ಆಫೆರ್ಸ್​ ಸೆಂಟರ್​ ಬಿಡುಗಡೆ ಮಾಡಿದ ಸಾರ್ವಜನಿಕ ವ್ಯವಹಾರ ಸೂಚ್ಯಂಕ (PAC) 2018 ತಿಳಿಸಿದೆ.

2016ರಿಂದಲೂ ದೇಶದ ಉತ್ತಮ ಆಡಳಿತದಲ್ಲಿ ಕೇರಳ ಮೊದಲ ಸ್ಥಾನವನ್ನು ಪಡೆಯುತ್ತ ಬಂದಿದೆ. ಇನ್ನು ಈ ಸೂಚ್ಯಂಕ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ ಎಂದು ಬೆಂಗಳೂರು ಮೂಲದ ಪ್ಯಾಕ್​ ಶನಿವಾರ ಸಂಜೆ ವರದಿ ಬಿಡುಗಡೆ ಮಾಡಿದೆ.

2016ರಿಂದ ಈ ವಾರ್ಷಿಕ ವರದಿ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯಗಳ ದತ್ತಾಂಶದ ವರದಿ ಆಧಾರಿಸಿದ ಕಾರ್ಯ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೀಡಿದ ಸೌಲಭ್ಯ ಆಧರಿಸಿ ಈ ವರದಿ ತಯಾರಿಸಲಾಗಿದೆ.

ಪ್ರಖ್ಯಾತ ಭಾರತದ ಆರ್ಥಿಕ ತಜ್ಞ ಸ್ಯಾಮೂಯಲ್​ ಪೌಲ್​ 1994 ಇದನ್ನು ಸ್ಥಾಪನೆ ಮಾಡಿದ್ದು, ಅವರು ದೇಶದಲ್ಲಿ ಉತ್ತಮ ಆಡಳಿತಕ್ಕಾಗಿ ಬೇಡಿಕೆಗಳನ್ನು ಸಜ್ಜುಗೊಳಿಸಲು ಇದು ಥಿಂಕ್​ ಟ್ಯಾಂಕ್ ಕೆಲಸ ಮಾಡುತ್ತದೆ.

ಕೇರಳದ ನಂತರದ ಐದು ಸ್ಥಾನಗಳಲ್ಲಿ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ್​ ಇದ್ದು, ಉತ್ತಮ ಆಡಳಿತ ನಡೆಸುತ್ತಿದೆ ಎಂದು ವರದಿ ತಿಳಿಸಿದೆ. ಮಧ್ಯಪ್ರದೇಶ, ಜಾರ್ಖಂಡ್​ ಮತ್ತು ಬಿಹಾರ್​ ಕೊನೆಯ ಮೂರು ಸ್ಥಾನಗಳಲ್ಲಿದ್ದು ಈ ರಾಜ್ಯಗಳಲ್ಲಿ ಸಾಮಾಜಿಕ ಮತ್ತುಆರ್ಥಿಕ ಅಸಮಾನತೆ ಹೊಂದಿದೆ.

ಕಡಿಮೆ ಜನಸಂಖ್ಯೆ ಹೊಂದಿರುವ ಚಿಕ್ಕರಾಜ್ಯಗಳಲ್ಲಿ ಹಿಮಾಚಲ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಗೋವಾ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾ ಮೊದಲ ಐದು ಉತ್ತಮ ಆಡಳಿತ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿದೆ. ನ್ಯಾಗಲ್ಯಾಂಡ್​, ಮಣಿಪುರ ಮತ್ತು ಮೇಘಾಲಯ ಉತ್ತಮ ಸರ್ಕಾರ ಹೊಂದಿರುವ ಸಣ್ಣ ರಾಜ್ಯಗಳ ಪಟ್ಟಿ ಕೊನೆಯ ಸ್ಥಾನ ಪಡೆದಿದೆ.

ಜನಸಂಖ್ಯೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶವಾದ ಭಾರತ ತನ್ನ ಅಭಿವೃದ್ಧಿಯ ಸವಾಲುಗಳನ್ನು ನಿರ್ಣಯಿಸಲು ಮತ್ತು ಪರಿಹರಿಸುವ ಅಗತ್ಯವಿದೆ ಎಂದು ಕೆ. ಕಸ್ತೂರಿರಂಗನ್​ ಈ ಸಂಧರ್ಭದಲ್ಲಿ ತಿಳಿಸಿದ್ದಾರೆ.

ಮೂಲಭೂತ ಸೌಕರ್ಯ, ಮಾನವ ಅಭಿವೃದ್ಧಿ ಬೆಂಬಲ, ಸಾಮಾಜಿಕ ರಕ್ಷಣೆಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೇಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಭಾರತದಾದ್ಯಂತ ಅಭಿವೃದ್ಧಿಯ ಹತ್ತು ಅಗತ್ಯ ಅಂಶಗಳ ಕುರಿತು ದೇಶದ್ಯಾಂತ ಅಧ್ಯಯನ ನಡೆಸಲಾಗಿದೆ.

ಅಧ್ಯಯನದ ವೇಳೆ ಜನಸಂಖ್ಯೆ ಆಧಾರದ ಮೇಲೆ ದೊಡ್ಡ ಮತ್ತು ಸಣ್ಣ ರಾಜ್ಯಗಳು ಎಂದು ಎರಡು ವರ್ಗ ಮಾಡಿ ಅಧ್ಯಯನ ಮಾಡಲಾಗಿದೆ. 2ಕೋಟಿಗಿಂತ ಹೆಚ್ಚಿಗೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವನ್ನು ದೊಡ್ಡ ರಾಜ್ಯ ಎಂದು ಪರಿಗಣಿಸಲಾಗಿದೆ. ಒಟ್ಟು 30 ಮುಖ್ಯ ವಿಷಯಗಳು ಮತ್ತು 100 ಸೂಚಕಗಳು ಅಂದಾಜು ಮಾಡಲ್ಪಟ್ಟ, ಸರ್ಕಾರದ ಮಾಹಿತಿಯ ಮೇಲೆ ಈ ವರದಿ ಅವಲಂಬಿಸಿದೆ.

Comments are closed.