ರಾಷ್ಟ್ರೀಯ

ರಾಹುಲ್​ ತಬ್ಬಿಕೊಂಡ ನಂತರ ನನ್ನ ಪತ್ನಿ ವಿಚ್ಛೇದನ ಕೊಟ್ಟು ಬಿಟ್ಟರೆ?

Pinterest LinkedIn Tumblr


ನವದೆಹಲಿ: “ನನ್ನನ್ನು ಅವಹೇಳನ ಮಾಡಿದರೂ ಸರಿಯೇ, ನನಗೆ ಯಾರ ಮೇಲೂ ದ್ವೇಷವಿಲ್ಲ,” ಎನ್ನುತ್ತಾ ಸಂಸತ್​ ಕಲಾಪದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿದ್ದ ರಾಹುಲ್​ ಗಾಂಧಿ ಅವರ ಸುತ್ತಲ ಕೀಟಲೆಗಳು ಇನ್ನೂ ನಿಂತಿಲ್ಲ.

ಅದು ಈಗ ಯಾವ ಹಂತಕ್ಕೆ ತಲುಪಿದೆ ಎಂದರೆ ರಾಹುಲ್​ ಅಪ್ಪಿದರೆ ತಮ್ಮ ಪತ್ನಿಯರು ವಿಚ್ಛೇದನ ನೀಡಿಬಿಟ್ಟಾರು ಎಂಬ ಭಯ ಬಿಜೆಪಿ ನಾಯಕರಿಗೆ ಮೂಡುವ ಹಂತಕ್ಕೂ ಹೋಗಿದೆ.

ಈ ಕುರಿತು ಸಂಸತ್​ ಭವನದ ಎದುರು ಮಾತನಾಡಿರುವ ಬಿಜೆಪಿ ಸಂಸದ ನಿಶಿಕಾಂತ್​ ದುಬೆ, ” ಹೌದು ರಾಹುಲ್​ ಗಾಂಧಿ ಅವರನ್ನು ಕಂಡರೆ ನಮಗೆ ಭಯವಾಗುತ್ತಿದೆ. ಅವರು ಅಪ್ಪಿಕೊಂಡುಬಿಟ್ಟರೆ ನಮ್ಮ ಪತ್ನಿಯರು ವಿಚ್ಛೇದನ ನೀಡಿಬಿಡುತ್ತಾರೆ ಎಂಬ ಭಯವಿದೆ. ದೇಶದಲ್ಲಿ ಐಪಿಸಿ ಸೆಕ್ಷನ್ 377ನೇ (ಸಲಿಂಗ ಕಾಮ ನಿರ್ಬಂಧಿಸುವ ಕಾನೂನು) ಬೇರೆ ರದ್ದಾಗಿಲ್ಲ. ಒಂದು ವೇಳೆ ರಾಹುಲ್​ ಅವರು ಮದುವೆಯಾದರೆ ಆಗ ನಾವು ಅವರನ್ನು ಅಪ್ಪಿಕೊಳ್ಳುತ್ತೇವೆ,” ಎಂದು ಮಾಧ್ಯಮಗಳಿಗೆ ವ್ಯಂಗಭರಿತ ಧಾಟಿಯಲ್ಲೇ ಪ್ರತಿಕ್ರಿಯಿಸಿದ್ದಾರೆ.

ಇಂದು ಬೆಳಗ್ಗೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ರಾಹುಲ್​ ಗಾಂಧಿ ” ಬಿಜೆಪಿ ನಾಯಕರು ನನ್ನನ್ನು ಕಂಡರೆ ಸಾಕು ಎಲ್ಲಿ ಅಪ್ಪಿಕೊಂಡುಬಿಡುತ್ತೇನೋ ಎಂಬ ಭಯದಿಂದ ಎರಡು ಹೆಜ್ಜೆ ಹಿಂದೆ ಇಡುತ್ತಿದ್ದಾರೆ,” ಎಂದು ಹೇಳಿಕೊಂಡಿದ್ದರು.

Comments are closed.