ರಾಷ್ಟ್ರೀಯ

ಗೋಶಾಲೆಯಲ್ಲಿ 36 ಗೋವುಗಳು ದಿಢೀರ್​ ಸಾವು

Pinterest LinkedIn Tumblr


ನವದೆಹಲಿ: ದೆಹಲಿ ಹೊರ ವಲಯದ ಚಾವ್ಲಾ ಎಂಬಲ್ಲಿ ಇರುವ ಗೋಶಾಲೆಯಲ್ಲಿ ಎರಡು ದಿನಗಳಲ್ಲಿ ಸುಮಾರು 36 ಗೋವುಗಳು ದಿಢೀರ್ ​ ಸಾವನಪ್ಪಿದ್ದು ಸ್ಥಳೀಯ ನಾಗರಿಕರು ಆತಂಕಕ್ಕೀಡಾಗಿದ್ದಾರೆ.

ಶುಕ್ರವಾರ ಬೆಳಗ್ಗೆ ವಿಚಾರ ತಿಳಿಯುತ್ತಲೇ ಗೋಶಾಲೆ ಬಳಿಗೆ ವೈದ್ಯಾಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿದರು.
ಒಂದು ಮಾದರಿಯ ಸೋಂಕು ಗೋಶಾಲೆಯಲ್ಲಿ ಆವರಿಸಿರುವುದರಿಂದ ಗೋವುಗಳು ಸಾಮೂಹಿಕವಾಗಿ ಸಾವಿಗೀಡಾಗಿವೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆದರೆ, ಗೋವುಗಳ ಸಾವಿಗೆ ನಿಖರ ಕಾರಣ ತಿಳಿಯುವ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ವೈದ್ಯರು ಇಡೀ ಗೋಶಾಲೆಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.

ದೆಹಲಿಯ ಚಾವ್ಲಾದಲ್ಲಿರುವ ಈ ಗೋಶಾಲೆಯಲ್ಲಿ ಸರಿಸುಮಾರು 1,400ಕ್ಕೂ ಹೆಚ್ಚು ಹಸುಗಳಿದ್ದು, ಅವುಗಳಿಗೆ ಸೋಂಕು ತಗಲದಂತೆ ಕ್ರಮ ಕೈಗೊಳ್ಳಲಾಗಿದೆ.

Comments are closed.