ತಮ್ಮಾನಮ್(ಕೇರಳ): ನಿಮ್ಮ ಯಾವುದೇ ಸಹಾಯ ನನಗೆ ಬೇಡ. ನನ್ನನ್ನು ನನ್ನ ಪಾಡಿಗೆ ಇರಲು ಬಿಟ್ಟುಬಿಡಿ ಎಂದು ಕೇರಳದ ವಿದ್ಯಾರ್ಥಿನಿಯೊಬ್ಬಳು ತನ್ನ ಪರ ಸಾಮಾಜಿಕ ಜಾಲತಾಣದಲ್ಲಾಗುತ್ತಿರುವ ಟ್ರೋಲ್ಗಳಿಗೆ ಅಲವತ್ತುಕೊಂಡಿದ್ದಾಳೆ.
ಎರ್ನಾಕುಲಂನ ತಮ್ಮಾನಮ್ ನಿವಾಸಿಯಾಗಿರುವ ಹನಾನ್(21) ತೊಡುಪುಳನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಅಧ್ಯಯನ ಮಾಡುತ್ತಿದ್ದು, ಈಕೆ ಉಚಿತ ಸಮಯದಲ್ಲಿ ಮೀನು ಮಾರಾಟ ಮಾಡಿ ಕುಟುಂಬದವರಿಗೆ ನೆರವಾಗುತ್ತಿದ್ದಾಳೆ.
ಪ್ರತಿದಿನ ಬೆಳಗ್ಗೆ ಮೂರು ಗಂಟೆಗೆ ಏಳುವ ಹನಾನ್ ಬೈಸಿಕಲ್ ತೆಗೆದುಕೊಂಡು ಛಂಬಕ್ಕರ ಪಟ್ಟಣಕ್ಕೆ ತೆರಳಿ ಅಲ್ಲಿ ಮೀನನ್ನು ಕೊಂಡು ನಂತರ ತಮ್ಮಾನಮ್ನಲ್ಲಿನ ಅಂಗಡಿಯಲ್ಲಿಡುತ್ತಾಳೆ. ಕಾಲೇಜು ಮುಗಿಸುಕೊಂಡು ಬಂದ ನಂತರ ಮೀನು ಮಾರಾಟ ಮಾಡುವ ಈಕೆಯ ಬಗ್ಗೆ ಮಲೆಯಾಳಂನ ಮಾತೃಭೂಮಿ ದಿನ ಪತ್ರಿಕೆಯಲ್ಲಿ ಎರಡು ದಿನಗಳ ಹಿಂದೆ ವಿಶೇಷ ಲೇಖನ ಪ್ರಕಟವಾಗಿತ್ತು.
ನಂತರ ಈಕೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ಗಳು ಆಗಲು ಶುರುವಾಯಿತು. ಕೆಲವರು ಈಕೆ ಸಿನಿಮಾ ಪ್ರಮೋಷನ್ಗಾಗಿ ಈ ರೀತಿ ಮಾಡುತ್ತಿದ್ದಾಳೆ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಆಕೆಗೆ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತಿರುವ ಹನಾನ್ ಟ್ರೋಲ್ ಮಾಡುವವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾಳೆ.
ನನಗೆ ನಿಮ್ಮ ಯಾವುದೇ ಸಹಾಯ ಬೇಡ. ನನ್ನನ್ನು ನನ್ನ ಪಾಡಿಗೆ ಬಿಡಿ. ಯಾರಿಗೂ ಅಡಿಯಾಳಾಗದೆ ಕೆಲಸ ಮಾಡಿ ನನ್ನ ಪ್ರತಿನಿತ್ಯ ಊಟಕ್ಕಾಗಿ ಹಾಗೂ ವಿದ್ಯಾಭ್ಯಾಸಕ್ಕಾಗಿ ಸಂಪಾದನೆ ಮಾಡಲು ನನ್ನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಕಲಾವಿದರೂ ಹಾಗೂ ರಾಜಕಾರಣಿಗಳೆನ್ನದೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಆದರೂ, ಒಂದು ವರ್ಗದ ಜನ ಅನುಮಾನ ವ್ಯಕ್ತಪಡಿಸಿ ಇದು ಮೋಸ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಕೇರಳದ ಮುಖ್ಯಮಂತ್ರಿ ಕಚೇರಿ ಈಕೆಯ ನೆರವಿಗೆ ಧಾವಿಸಿದೆ.
Comments are closed.