ಫೈಝಾಬಾದ್: ಭಾರತದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ವೃದ್ಧಿಯಾಗುತ್ತಿರುವುದರಿಂದಲೇ ಇತ್ತೀಚೆಗೆ ಸಮಾಜದಲ್ಲಿ ಅತ್ಯಾಚಾರ, ಕೊಲೆಯಂಥ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಉತ್ತರಪ್ರದೇಶದ ಬಿಜೆಪಿ ಸಂಸದ ಹರಿ ಓಂ ಪಾಂಡೆ ವಿವಾದಿತ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಅಂಬೇಡ್ಕರ್ ನಗರದಿಂದ ಆಯ್ಕೆಯಾಗಿರುವ ಹರಿ ಓಂ ಪಾಂಡೆ, “ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯನ್ನು ನಿಯಂತ್ರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಅತಿ ಶೀಘ್ರದಲ್ಲೇ ಪಾಕಿಸ್ತಾನದ ರೀತಿಯಲ್ಲೇ ಮತ್ತೊಂದು ಪ್ರಾಂತ್ಯ ಭಾರತದಿಂದ ವಿಭಜನೆಯಾಗಿ ಪ್ರತ್ಯೇಕ ದೇಶ ರಚನೆ ಮಾಡಿಕೊಳ್ಳಲಿದೆ,” ಎಂದೂ ಹೇಳಿಕೆ ನೀಡಿದ್ದಾರೆ.
“ಭಯೋತ್ಪಾದನೆ, ಅತ್ಯಾಚಾರ, ಲೈಂಗಿಕ ಕಿರುಕುಳ ಭಾರತದಲ್ಲಿ ನಡೆಯುತ್ತಿರುವುದಕ್ಕೆ ಕಾರಣ ಮುಸ್ಲಿಮರ ಜನಸಂಖ್ಯೆ ಹೆಚ್ಚಳ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮುಸ್ಲಿಮರ ಜನಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದನ್ನು ಯಾರು ಬೇಕಾದರೂ ಗಮನಿಸಬಹುದು,”ಎಂದಿದ್ದಾರೆ.
ಇದಲ್ಲದೆ, ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಭಾರತದ ಆರ್ಥಿಕತೆ ಕುಂಟಿತಗೊಳ್ಳುತ್ತಿದೆ. ಜತೆಗೆ, ನಿರುದ್ಯೋಗ ಸಮಸ್ಯೆಯೂ ಹೆಚ್ಚುತ್ತಿದೆ.
Comments are closed.