ಬಂಕುರಾ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಟೋಗ್ರಾಫ್ ಪಡೆದ ಕೋಲ್ಕತ್ತಾದ ಯುವತಿಯೋರ್ವಳು ಇದೀಗ ಸೆಲಿಬ್ರಿಟಿಯಾಗಿಬಿಟ್ಟಿದ್ದಾಳೆ.
ಹೌದು ಜುಲೈ 16ರಂದು ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ನಡೆದಿದ್ದ ಭಾಷಣದ ವೇಳೆ ಹಾಕಿದ್ದ ಟೆಂಟ್ ಕುಸಿದು ಬಿದ್ದಿದ್ದು ಈ ವೇಳೆ ಮೋದಿ ಭಾಷಣ ಕೇಳಲು ಬಂದಿದ್ದ ಬಂಕುರಾ ನಿವಾಸಿ ರೀಟಾ ಮುಡಿ ಗಾಯಗೊಂಡಿದ್ದರು. ಗಾಯಾಳುಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದಾಗ ರೀಟಾ ಪ್ರಧಾನಿ ಮೋದಿಯಿಂದ ಆಟೋಗ್ರಾಫ್ ಪಡೆದಿದ್ದಳು. ಇದೇ ರೀಟಾಳನ್ನು ಸೆಲೆಬ್ರಿಟಿಯನ್ನಾಗಿ ಮಾಡಿದೆ.
ಹೌದು ರೀಟಾ ಮುಡಿಗೆ ನೂರಾರು ಯುವಕರು ಮದುವೆ ಪ್ರಸ್ತಾಪವನ್ನು ಮುಂದಿಡುತ್ತಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ಆಟೋಗ್ರಾಫ್ ನೋಡಲು ಜನ ಸಾಲುಗಟ್ಟಿ ರೀಟಾ ಮನೆಗೆ ಬರುತ್ತಿದ್ದಾರೆ.
ಕೇವಲ ಮನೆಗೆ ಮಾತ್ರ ಜನ ಬರುತ್ತಿಲ್ಲ. ಕಳೆದ 10 ದಿನಗಳಲ್ಲಿ ರೀಟಾಗೆ ಎರಡು ಮದುವೆ ಪ್ರಸ್ತಾಪಗಳು ಬಂದಿವೆ ಎಂದು ತಾಯಿ ಸಂಧ್ಯಾ ತಿಳಿಸಿದ್ದಾರೆ.
Comments are closed.