ರಾಷ್ಟ್ರೀಯ

ಎಸ್‌ಪಿ-ಬಿಎಸ್‌ಪಿ ಮೈತ್ರಿ ಫಲಿಸುವುದಿಲ್ಲ: ಯೋಗಿ ಆದಿತ್ಯನಾಥ್

Pinterest LinkedIn Tumblr


ಲಕ್ನೋ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜವಾದಿ ಪಾರ್ಟಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಅದು ಫಲಿಸುವುದಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.

ಎರಡೂ ಪಕ್ಷಗಳು ತಲೆಬುಡವಿಲ್ಲದ ಮೈತ್ರಿಗೆ ಮುಂದಾಗಿವೆ. ಇಬ್ಬರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಮಾಯಾವತಿ ಅಖಿಲೇಶ್ ನಾಯಕತ್ವದಲ್ಲಿ ಕೆಲಸ ಮಾಡಲು ಸಿದ್ಧರಿಲ್ಲ. ಆದರೆ ಮಾಯಾವತಿ ನಾಯಕತ್ವವನ್ನು ಅಖಿಲೇಶ್ ಒಪ್ಪುವುದಿಲ್ಲ. ಹೀಗಾಗಿ ಮೈತ್ರಿ ನಡೆದರೂ, ಅದು ಸಹಮತವಿರುವುದಿಲ್ಲ. ಇದರಿಂದ ಅವರಿಗೇ ಹಿನ್ನಡೆಯಾಗಲಿದೆ ಎಂದು ಯೋಗಿ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ 75ಕ್ಕಿಂತ ಅಧಿಕ ಸೀಟು ಗೆಲ್ಲಲಿದೆ. ಬಿಜೆಪಿ ಮೇಲೆ ಎಸ್‌ಪಿ-ಬಿಎಸ್‌ಪಿ ಮೈತ್ರಿ ಯಾವುದೇ ಪ್ರಭಾವ ಬೀರುವುದಿಲ್ಲ ಎಂದಿರುವ ಯೋಗಿ, ನಾಯಕತ್ವ ವಿಚಾರದಲ್ಲಿ ಉಭಯ ಪಕ್ಷಗಳು ಕೂಡ ಮುಂದಾಳತ್ವಕ್ಕೆ ಮುಂದಾಗಿವೆ ಎಂದಿದ್ದಾರೆ.

ಬಿಜೆಪಿ ಮತ್ತು ಪ್ರಧಾನಿ ಮೋದಿ ಪ್ರಭಾವ, ಉತ್ತರ ಪ್ರದೇಶದಲ್ಲಿ ತಮ್ಮ ಸರಕಾರ ಕೈಗೊಂಡಿರುವ ಹಲವು ಅಭಿವೃದ್ಧಿ ಕೆಲಸಗಳು ಮತಗಳಿಕೆಗೆ ಸಹಕಾರಿಯಾಗಲಿವೆ. ರಾಜ್ಯ ಸರಕಾರದ ಯೋಜನೆಗಳು ಜನರನ್ನು ತಲುಪಿದ್ದು, ಉತ್ತಮ ಫಲಿತಾಂಶ ನೀಡಲಿದೆ ಎಂದು ಯೋಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.