ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಯನ್ನು ಉಗ್ರರು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಲ್ಗಾಮ್ ಜಿಲ್ಲೆಯಲ್ಲಿ ಪೊಲೀಸ್ ಪೇದೆಯನ್ನು ಅಪಹರಿಸಿ ಹತ್ಯೆ ಮಾಡಿದ ಕೆಲ ದಿನಗಳ ನಂತರ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಅಪಹರಿಸಿದ್ದಾರೆ.
ಅಪಹರಣಕ್ಕೊಳಗಾದ ಅಧಿಕಾರಿಯನ್ನು ಶಕೀಲ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದ್ದು, ಜಮ್ಮು ಕಾಶ್ಮೀರದ ವಿಶೇಷ ಅಧಿಕಾರಿಯಾಗಿದ್ದ ಅವರು ಅಡುಗೆಯವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪುಲ್ವಾಮ ಜಿಲ್ಲೆಯ ಚಾನ್ ಕಿತಾರ್ ಟ್ರಾಲ್‌ನಲ್ಲಿ ರಾತ್ರಿ ವೇಳೆ ಅಪಹರಿಸಿದ್ದಾರೆಂದು ನಂಬಲಾಗಿದ್ದು, ಈ ಕುರಿತು ಲೊಕೇಷನ್ ಪತ್ತೆ ಹಚ್ಚಲು ಮತ್ತು ಅಧಿಕಾರಿಯ ಹುಡುಕಾಟಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಎಸ್‌ಪಿ ವೈಡ್ ಮಾತನಾಡಿ, ಅಧಿಕಾರಿ ಅಪಹರಣವಾಗಿರುವ ಬಗ್ಗೆ ಆತನ ಕುಟುಂಬದಿಂದ ಮಾಹಿತಿ ಪಡೆಯಲಾಗಿದ್ದು, ತನ್ನ ಸಂಬಂಧಿಯೊಬ್ಬರ ಮನೆಗೆ ತೆರಳಿದ್ದ ವೇಳೆ ಉಗ್ರರು ಅಪಹರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಕಳೆದ ವಾರವಷ್ಟೇ ಪೊಲೀಸ್ ಪೇದೆಯೊಬ್ಬರನ್ನು ಅಪಹರಿಸಿದ್ದ ಹಿಜ್ಹುಲ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಉಗ್ರರ ತಂಡ ಅವರನ್ನು ಹತ್ಯೆ ಮಾಡಿದ್ದರು. ಪೇದೆ ಸಲೀಮ್ ಶಾ ಎಂಬಾತ ರಜೆಯ ಮೇಲೆ ಊರಿಗೆ ತೆರಳಿದ್ದಾಗ ಕುಲ್ಗಾಮ್ ಜಿಲ್ಲೆಯಿಂದ ಅವರನ್ನು ಅಪಹರಣ ಮಾಡಿದ್ದರು.
Comments are closed.