ರಾಷ್ಟ್ರೀಯ

ಲಕ್ಷ ಕೊಟ್ಟರೆ ಜೈಲಲ್ಲೇ ಬರ್ಥ್‌ಡೇ ಆರಿಸಿಕೊಳ್ಳಬಹುದು!

Pinterest LinkedIn Tumblr


ಲಖನೌ: ಮಾಡಿದ ಅಪರಾಧಕ್ಕೆ ಶಿಕ್ಷೆ ಅನುಭವಿಸಲು ಜೈಲು ಸೇರಿದ ಖೈದಿಗಳಿಗೂ ಶೋಲಿಗೇನೂ ಕಮ್ಮಿ ಇಲ್ಲ ಎನ್ನುವಂತ ಘಟನೆಯೊಂದು ಫೈಜಾಬಾದ್ ಜೈಲಿನಲ್ಲಿ ನಡೆದಿದೆ.

ಖೈದಿಯೊಬ್ಬ ತನ್ನ ಜನ್ಮದಿನವನ್ನು ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರೆ, ಪೊಲೀಸರು ಚಪ್ಪಾಳೆ ತಟ್ಟುತ್ತಾ ಕೇಕ್ ತಿಂದು ಅವನಿಗೆ ಸಾಥ್ ನೀಡಿದ್ದಾರೆ. ಆತ ಜನ್ಮದಿನಾಚರಣೆಯ ಸಿದ್ಧತೆಗಾಗಿ ಜೈಲರ್‌ಗೆ ಒಂದು ಲಕ್ಷ ರೂ. ನೀಡಿದ್ದಾನೆ. ಜೈಲಿನಲ್ಲಿ ಖೈದಿಯ ಜನ್ಮದಿನವನ್ನು ಆಚರಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಹರಿದಾಡುತ್ತಿದೆ.

ಜೈಲಿನೊಳಗೆ ಯಾವುದೇ ರೀತಿಯ ಚೂಪಾದ ಹಾಗೂ ಸುಡುವಂತಹ ವಸ್ತುಗಳನ್ನು ಜೈಲಿನೊಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದ್ದರೂ ವೈರಲ್ ಆಗಿರುವ ವಿಡಿಯೋದಲ್ಲಿ ದರೋಡೆಕೋರ ಶಿವೇಂದ್ರ ಸಿಂಗ್ ಜೈಲಿನ ತನ್ನ ಛಾಯಾಚಿತ್ರ ಒಳಗೊಂಡಿರುವ ಕೇಕ್ ಕತ್ತರಿಸುತ್ತಿರುವ ದೃಶ್ಯವಿದೆ. ಆತ ಮೇಣದ ಬತ್ತಿ ಹಚ್ಚಿ, ಕೇಕ್ ಕತ್ತರಿಸುವ ಮೂಲಕ ತನ್ನ ಹುಟ್ಟು ಹಬ್ಬ ಆಚರಿಸಿದ್ದಾನೆ. ಈ ಸಂಭ್ರಮದ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ಈ ಘಟನೆ ಜುಲೈ 23 ರಂದು ನಡೆದಿದೆ ಎನ್ನಲಾಗಿದೆ. ಶನಿವಾರ ಈ ವಿಚಾರಣೆಗಾಗಿ ನ್ಯಾಯಾಲಯ ತಲುಪಿದ್ದ ಖೈದಿ ಶಿವೇಂದ್ರ ಬಳಿ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಜೈಲರ್ ವಿನಯ್ ಸಿಂಗ್ ತನ್ನಿಂದ ಒಂದು ಲಕ್ಷ ಪಡೆದುಕೊಂಡು, ಹುಟ್ಟುಹಬ್ಬದ ಆಚರಣೆಯ ವ್ಯವಸ್ಥೆ ಮಾಡಿದ್ದರು. ಹಣ ನೀಡುವ ಮೂಲಕ ತಮಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಪಡೆಯಬಹುದು ಎಂದು ಹೇಳಿದ್ದಾನೆ.

ವೈರಲ್ ಆಗಿರುವ ವೀಡಿಯೋ ಕಂಡ ಎಡಿಜಿ ಚಂದ್ರ ಪ್ರಕಾಶ್, ಈ ಪ್ರಕರಣದ ಕುರಿತು ಕೂಲಂಕುಶ ತನಿಖೆ ನಡೆಸಿ, ಶೀಘ್ರವಾಗಿ ಅದರ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಿದ್ದಾರೆ.

Comments are closed.