ರಾಷ್ಟ್ರೀಯ

100 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿಯನ್ನು ಹೊರ ತೆಗೆಯುವಲ್ಲಿ ಯಶಸ್ವಿ!

Pinterest LinkedIn Tumblr


ಮುಗೆರ್ (ಬಿಹಾರ): ಮಂಗಳವಾರ ಆಟವಾಡುತ್ತ ಸುಮಾರು 100 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ರಕ್ಷಣಾ ಸಿಬ್ಬಂದಿ ಬಾಲಕಿಯನ್ನು ಹೊರ ತಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍‍ಡಿಆರ್ ಎಫ್‍‍) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸತತ 29 ಗಂಟೆಗಳ ಕಾಲ ನಡೆಸಿದ ಜಂಟಿ ಕಾರ್ಯಾಚರಣೆಯಿಂದಾಗಿ ಬುಧವಾರ ರಾತ್ರಿ 9:30ಕ್ಕೆ ಬಾಲಕಿಯನ್ನು ಹೊರ ತೆಗೆಯಲಾಯಿತು.

ಬ್ಯಾಂಕ್‍‍ ಉದ್ಯೋಗಿ ನಾಚಿಕೇತ್‍‍ ಶಾ ಅವರ ಮಗಳು ಸನಾ ಬಾವಿಗೆ ಬಿದ್ದಿದ್ದ ಬಾಲಕಿ. ಕೊಳವೆ ಬಾವಿಯಲ್ಲಿ ಬಿದ್ದಿದ್ದರಿಂದ ಬಾಲಕಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ

Comments are closed.