ರಾಷ್ಟ್ರೀಯ

ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ 94 ಕೋಟಿ ದರೋಡೆಗೈದ ಕಳ್ಳ!

Pinterest LinkedIn Tumblr


ಪುಣೆ: ಹೈಟೆಕ್ ಚಾಲಾಕಿ ಕಳ್ಳನೊಬ್ಬ ಕುಳಿತ್ತಲ್ಲೆ ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಬರೋಬ್ಬರಿ 94 ಕೋಟಿ ರುಪಾಯಿಯನ್ನು ದೋಚಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಕಾಸ್ಮಾಸ್ ಬ್ಯಾಂಕ್ ನ ಹಲವು ಬ್ರಾಂಚ್ ಗಳಿಗೆ ಈತ ಕನ್ನ ಹಾಕಿದ್ದು ಈ ಹಣವನ್ನು ಹಾಂಕ್ ಕಾಂಗ್ ಮತ್ತು ಭಾರತದ ಕೆಲ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ.
Ads by ZINC

ಕಳೆದ ಆಗಸ್ಟ್ 11ರಂದು ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಬರೋಬ್ಬರಿ 78 ಕೋಟಿಯನ್ನು ದೋಚಲಾಗಿದೆ. ಇನ್ನು ಆಗಸ್ಟ್ 13ರಂದು ಮತ್ತೊಮ್ಮೆ ಹ್ಯಾಕ್ ಮಾಡಿ 14 ಕೋಟಿ ರುಪಾಯಿ ದೋಚಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಚತುಶ್ರಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಸ್ಮಾಸ್ ಸಹಕಾರಿ ಬ್ಯಾಂಕ್ ಭಾರತದ ಹಳೆಯ ನಗರ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿದೆ. ಪುಣೆ ಮೂಲದ ಈ ಬ್ಯಾಂಕ್ 2006ರ ಜನವರಿ 18ರಂದು ಶತಮಾನೋತ್ಸವವನ್ನು ಆಚರಿಸಿಕೊಂಡಿತ್ತು.

Comments are closed.