ಪುಣೆ: ಪಾಕಿಸ್ತಾನದ ಪ್ರಾಂತ್ಯದಲ್ಲಿ ನಡೆಸಲಾದ ಸರ್ಜಿಕಲ್ ಸ್ಟ್ರೈಕ್ ವೇಳೆ ಭಾರತೀಯ ಸೇನೆಯ ಯೋಧರು ಚಿರತೆ ಮೂತ್ರ ಹಾಗೂ ಮುಖವಾಡಗಳನ್ನು ಬಳಸಿದ್ದರಂತೆ !
ಹೌದು, ಪಾಕ್ನಲ್ಲಿ ರಾತ್ರಿ ಹೊತ್ತು ನಾಯಿಗಳಿಂದ ಬಚಾವಾಗಲು ಈ ತಂತ್ರ ಅನುಸರಿದ್ದಾಗಿ ನಿವೃತ್ತ ನಗ್ರೋಟ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೋರ್ಕರ್ ಹೇಳಿದ್ದಾರೆ.
ಪಾಕಿಸ್ತಾನದ ಗಡಿಯಿಂದ 15 ಕಿ.ಮೀ ಒಳಗೆ ನುಗ್ಗಿ 2016ರಲ್ಲಿ ಭಾರತ ಕೈಗೊಂಡಿದ್ದ ಸರ್ಜಿಕಲ್ ಸ್ಟ್ರೈಕ್ನ ಕುರಿತು ಅವರು ಮಾತನಾಡಿದ್ದಾರೆ. ಜೈವಿಕ ಶಾಸ್ತ್ರವನ್ನು ಅಧ್ಯಯನ ನಡೆಸಿದ್ದರು. ಸರ್ಜಿಕಲ್ ದಾಳಿ ವೇಳೆ ಅವರ ಪಾತ್ರವೂ ಸಾಕಷ್ಟಿತ್ತು. ನೌಶೆರದಲ್ಲಿ ಅವರು ಸೇನೆಯ ಬ್ರಿಗೇಡ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು.
ನೌಶೆರದಲ್ಲಿ ಸೇವೆಯಲ್ಲಿರುವ ವೇಳೆ, ಚಿರತೆಗಳು ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದವು. ನಾಯಿಗಳು ಚಿರತೆಗಳಿಂದ ರಕ್ಷಿಸಲು ಹೊರ ಹೋಗುತ್ತಿರಲಿಲ್ಲ. ಸರ್ಜಿಕಲ್ ದಾಳಿ ವೇಳೆ ಸೈನಿಕರು ಗ್ರಾಮ, ಹಳ್ಳಿಗಳ ನಡುವೆ ಸಾಗವ ವೇಳೆ ನಾಯಿಗಳಿಂದ ದಾಳಿಯಾಗುವ ಸಂಭವವಿತ್ತು. ಇದನ್ನು ತಪ್ಪಿಸಲು ಚಿರತೆ ಮೂತ್ರ ಹಾಗೂ ಮುಖವಾಡಗಳನ್ನು ಬಳಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಅಂದಿನ ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ಯೋಜನೆ ಜಾರಿಗೊಳಿಸಲು ಒಂದು ವಾರದ ಗಡುವು ನೀಡಿದರು. ಸೈನಿಕರಿಗೆ ಸಂಪೂರ್ಣ ಯೋಜನೆಯನ್ನು ತಿಳಿಸಲಾಯಿತಾದರೂ, ಅನುಷ್ಠಾನಗೊಳಿಸುವ ದಿನಾಂಕ, ಸ್ಥಳದ ಕುರಿತು ಮಾಹಿತಿ ನೀಡಿಲ್ಲ. ದಾಳಿಗೆ ತೆರಳುವ ಹಿಂದಿನ ದಿನ ದಾಳಿಯ ಸ್ಥಳದ ಬಗ್ಗೆ ಮಾಹಿತಿ ನೀಡಲಾಯಿತು ಎಂದು ರಾಜೇಂದ್ರ ನಿಂಬೋರ್ಕರ್ ಹೇಳಿದ್ದಾರೆ.
ದಾಳಿಗೆ ಮುಂಜಾನೆಯ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದೆವು. ಉಗ್ರರ ಲಾಂಚ್ಪ್ಯಾಡ್ಗಳನ್ನು ನಾವು ಗುರುತಿಸಿದ್ದೆವು. ಮುಂಜಾನೆ 3.30ರ ವೇಳೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಷ್ಟರೊಳಗೆ ನಮ್ಮ ಸೈನ್ಯದ ತಂಡಗಳು ಕಷ್ಟದ ಹಾದಿ, ಅಪಾಯಕಾರಿ ನೆಲಬಾಂಬ್ ಇರುವ ಪ್ರದೇಶಗಳನ್ನು ದಾಟಿ, ದಾಳಿಗೆ ಸಿದ್ಧವಾಗಿದ್ದರು. ಯೋಜನೆಯ ಪ್ರಕಾರ ದಾಳಿ ನಡೆಸಿ 29 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು ಎಂದು ವಿವರಿಸಿದರು.
ಸರ್ಜಿಕಲ್ ದಾಳಿಯಲ್ಲಿ ಯಶಸ್ವಿಯಾಗಿಸಿದವರಲ್ಲಿ ನಿಂಬೋರ್ಕರ್ ಒಬ್ಬರಾಗಿದ್ದ ಹಿನ್ನೆಲೆಯಲ್ಲಿ,
ಥೋರ್ಲೆ ಬಾಜಿರಾವ್ ಪೇಶ್ವೆ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿಅವರನ್ನು ಸನ್ಮಾನಿಸಲಾಯಿತು. ಮಾಜಿ ಸಿಎಂ ಮನೋಹರ್ ಜೋಶಿ ಅವರನ್ನು ಸನ್ಮಾನಿಸಿದರು.
Comments are closed.