ರಾಷ್ಟ್ರೀಯ

ಮಲ್ಯ ಪರಾರಿಯಾಗಿದ್ದು ಹೇಗೆ ಮತ್ತು ಏಕೆ ಅವಕಾಶ ಕೊಟ್ಟಿರಿ?: ಕಾಂಗ್ರೆಸ್

Pinterest LinkedIn Tumblr


ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರುಪಾಯಿ ವಂಚಿಸಿ ದೇಶ ತೊರೆಯಲು ಹೇಗೆ ಮತ್ತು ಏಕೆ ಅವಕಾಶ ಕೊಟ್ಟಿರಿ ಎಂಬುದನ್ನು ಕೇಂದ್ರ ಸರ್ಕಾರ ವಿವರಿಸಬೇಕು ಎಂದು ಬುಧವಾರ ಕಾಂಗ್ರೆಸ್ ಆಗ್ರಹಿಸಿದೆ.
ಇಂದು ಲಂಡನ್ ನಲ್ಲಿ ವಿಜಯಲ್ ಮಲ್ಯ ಅವರು ತಾವು ಭಾರತ ಬಿಡುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿರುವುದಾಗಿ ಹೇಳಿದ್ದು, ಈ ಬಗ್ಗೆ ಸರ್ಕಾ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ವಂಚಿಸಿದ ವಿಜಯ್ ಮಲ್ಯರಂತಹ ವ್ಯಕ್ತಿಗಳು ವಿದೇಶಕ್ಕೆ ಹಾರಿ ಹೋಗಲು ಸಂಪೂರ್ಣ ಸಹಕಾರ ನೀಡಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು ಆರೋಪಿಸಿದ್ದಾರೆ.
ದೇಶದ ಜನ ವಿಜಯ್ ಮಲ್ಯ ಮತ್ತು ಅರುಣ್ ಜೇಟ್ಲಿ ನಡುವೆ ನಡೆದ ಮಾತುಕತೆಯ ವಿವರ ತಿಳಿದುಕೊಳ್ಳಲು ಬಯಸಿದ್ದಾರೆ ಎಂದು ಸಿಂಘ್ವಿ ಹೇಳಿದ್ದಾರೆ.

Comments are closed.