ರಾಷ್ಟ್ರೀಯ

ರಾಹುಲ್ ರಾಜೀವ್ ಗಾಂಧಿ-ಸೋನಿಯಾರ ಮಗನಲ್ಲದಿದ್ದರೆ 40,000 ಸಂಬಳದ ಕೆಲಸವೂ ಸಿಗುತ್ತಿರಲಿಲ್ಲ: ಮನೋಜ್ ತಿವಾರಿ

Pinterest LinkedIn Tumblr


ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಮನೋಜ್ ತಿವಾರಿ, ರಾಹುಲ್ ಅವರು ರಾಜೀವ್ – ಸೋನಿಯಾ ಗಾಂಧಿ ಪುತ್ರನಾಗಿಲ್ಲದಿದ್ದರೆ 40,000ರೂಪಾಯಿ ನೌಕರಿಯೂ ಸಿಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್ ಪ್ರಧಾನಿ ಮೋದಿಗೆ ಕಳ್ಳ ಎಂದು ಜರಿದಿರುವುದಕ್ಕೆ ಪ್ರತಿಏಟು ನೀಡಿದ ತಿವಾರಿ ,”ನೀವು ಒಬ್ಬ ಸಜ್ಜನರಾಗಿದ್ದರೆ ನಿಮಗೆ ಜಗತ್ತಿನ ತುಂಬೆಲ್ಲ ಸಜ್ಜನರೇ ಕಾಣುತ್ತಾರೆ. ನೀವೊಬ್ಬ ಕ್ರಿಮಿನಲ್‌, ಕಳ್ಳನಾಗಿದ್ದರೆ ಸಂಪೂರ್ಣ ಜಗತ್ತು ನಮ್ಮ ಹಾಗೆ ಇದೆ ಎಂದನಿಸುತ್ತದೆ. ರಾಹುಲ್ ಅವರೇ ನೀವು ಕಳ್ಳರಾಗಿರಬಹುದು, ದರೋಡೆಕೋರರಾಗಿರಬಹುದು. ನಿಮ್ಮ ಕುಟುಂಬ ಇಷ್ಟು ವರ್ಷಗಳ ಕಾಲ ದೇಶವನ್ನು ಕೊಳ್ಳೆ ಹೊಡೆದಿದೆ ಎಂದುಕೊಂಡು ಪ್ರಧಾನಿ ಕುರ್ಚಿಯ ಮೇಲೆ ಕುಳಿತಿರುವ ಪ್ರಾಮಾಣಿಕ ನರೇಂದ್ರ ಮೋದಿ ಅವರನ್ನು ನಿಮ್ಮಂತೆ ಎಂದುಕೊಳ್ಳಬೇಡಿ ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಸರಕಾರವಿದ್ದಾಗಲೇ ರಫೆಲ್ ಒಪ್ಪಂದದ ಮಾತುಕತೆ ನಡೆದಿತ್ತು ಅಂದ ಅವರು ಕಾಂಗ್ರೆಸ್ ಭಾರತೀಯರನ್ನು ಅಜ್ಞಾನಿಗಳೆಂದು ಭಾವಿಸಿದೆ ಎಂದು ತಿರುಗೇಟು ನೀಡಿದ್ದಾರೆ.

Comments are closed.