ಆಗ್ರಾ: ಇದೆಂಥ ಹುಚ್ಚುತನ ನೋಡಿ, ಜಗತ್ತಿನ ಪರಿಜ್ಞಾನವೇ ಇಲ್ಲದೆ ಕಿವಿಗೆ ಹೆಡ್‌ಫೋನ್ ಧರಿಸಿ ಹಾಡು ಕೇಳುತ್ತಾ ರೈಲ್ವೆ ಟ್ರ್ಯಾಕ್ ಮೇಲೆ ಕುಳಿತಿದ್ದ ಯುವಕನಿಗೆ ರೈಲು ಢಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕಾಸ್‌ಗಂಜ್-ಬರೇಲಿ ರೈಲ್ವೆ ಟ್ರ್ಯಾಕ್ ಮೇಲೆ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡಿರುವ ಯುವಕನನ್ನು ಕಾಸ್‌ಗಂಜ್ ಠಾಣಾ ವ್ಯಾಪ್ತಿಯ ಸದಾರ್ ಪ್ರದೇಶದ ಆವಾಸ್ ಕಾಲೋನಿ ನಿವಾಸಿ ರಾಹುಲ್ ಕುಮಾರ್ ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ 11.30ರ ಸುಮಾರಿಗೆ ಈ ಮಾರ್ಗದ ಮೂಲಕ ಬರೇಲಿ ಪ್ರಯಾಣಿಕರ ರೈಲು ಹಾದು ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಯುವಕನ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಲಿಗಢ್ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾಸ್‌ಗಂಜ್ ರೈಲು ನಿಲ್ದಾಣದ ಸ್ಟೇಷನ್ ಆಫೀಸರ್ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಕಿವಿಗೆ ಹೆಡ್‌ಫೋನ್ ಧರಿಸಿ ಹಾಡು ಕೇಳುತ್ತಿದ್ದ ರೈಲ್ವೆ ಟ್ರ್ಯಾಕ್ ಮೇಲೆ ಕುಳಿತಿದ್ದ ಯುವಕನಿಗೆ ರೈಲು ಢಿಕ್ಕಿ ಹೊಡೆದಿರುವುದನ್ನು ಸ್ಥಳೀಯ ನಿವಾಸಿಗಳು ಕಣ್ಣಾರೇ ಕಂಡಿದ್ದಾರೆ ಎಂದು ವರಿದಿಯಾಗಿದೆ.
Comments are closed.