ರಾಷ್ಟ್ರೀಯ

ಲಂಚದ ಹಣ ಸಮ ಹಂಚಿಕೆಗೆ ಬೇಡಿಕೆ ಇಟ್ಟ ಪೊಲೀಸಪ್ಪ: ವಿಡಿಯೋ ವೈರಲ್

Pinterest LinkedIn Tumblr


ಲಖನೌ: ಉತ್ತರ ಪ್ರದೇಶದ ಸುಲ್ತಾನ್‌ಪುರದ ಹಳಿಯಾಪುರ್ ಪೊಲೀಸ್ ಠಾಣೆಯಲ್ಲಿ ಜನರಿಂದ ಪಡೆದುಕೊಂಡ ಲಂಚವನ್ನು ಪೊಲೀಸರಿಬ್ಬರು ಸಮನಾಗಿ ಹಂಚಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಲಂಚ ಸ್ವೀಕರಿಸಿದ ಬಳಿಕ ಪೊಲೀಸ್ ಠಾಣೆಗೆ ಬರುವ ಹೆಡ್‌ಕಾನ್ಸ್‌ಟೆಬಲ್, ತಮ್ಮ ಸಮಸ್ಯೆಯನ್ನು ಹಿರಿಯ ಪೊಲೀಸ್ ಅಧಿಕಾರಿಯ ಜತೆ ಹಂಚಿಕೊಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಹೊರಗಡೆ ಜನರು ಸರಿಯಾಗಿ ಲಂಚ ಕೊಡುತ್ತಿಲ್ಲ. ಜನರು ನಮಗೆ ಗೌರವ ನೀಡುತ್ತಿಲ್ಲ. ನೀವು ಇಲ್ಲಿ ಕುಳಿತುಕೊಂಡೇ ಲಂಚ ಪಡೆಯುತ್ತೀರಿ, ಆದರೆ ಇಂದು ಲಂಚದ ಪಾಲು ಸಮನಾಗಿ ಹಂಚಿಕೆಯಾಗಬೇಕು ಎಂದು ಹೆಡ್‌ಕಾನ್ಸ್‌ಟೆಬಲ್ ವಿಜಯ್ ಶಂಕರ್ ಮಿಶ್ರಾ ಹಿರಿಯ ಪೊಲೀಸ್ ಅಧಿಕಾರಿಯ ಜತೆ ತನ್ನ ‘ನೋವು’ ತೋಡಿಕೊಂಡಿದ್ದಾರೆ.

ಪೊಲೀಸ್ ಪರಿಶೀಲನೆ, ಪಾಸ್‌ಪೋರ್ಟ್‌, ಪ್ರಮಾಣ ಪತ್ರ ವಿತರಣೆ ಇತ್ಯಾದಿ ವಿಚಾರದಲ್ಲಿ ಕಿರಿಕಿರಿ ಮಾಡಿ ಜನರಿಂದ ಪೊಲೀಸರು ಲಂಚ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಮೂಲ ವರದಿ: ನವಭಾರತ್ ಟೈಮ್ಸ್

Comments are closed.