ರಾಷ್ಟ್ರೀಯ

ಟ್ರೆಕ್ಕಿಂಗ್‌ ತೆರಳಿದ 45 ಐಐಟಿ ವಿದ್ಯಾರ್ಥಿಗಳು ಸೇರಿದಂತೆ 300 ಮಂದಿ ಸುರಕ್ಷಿತ

Pinterest LinkedIn Tumblr


ಶಿಮ್ಲಾ: ಹಿಮಾಚಲ ಪ್ರದೇಶದ ಮನಾಲಿ ಸಮೀಪ ಟೆಕ್ಕಿಂಗ್‌ಗೆ ತೆರಳಿದ್ದ 45 ಐಐಟಿ ವಿದ್ಯಾರ್ಥಿಗಳು ಸೇರಿದಂತೆ 300 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ 300 ಮಂದಿ ರೊಹ್ತಂಗ್‌ ಪಾಸ್‌ ಮತ್ತು ಲಾಹೂಲ್ ಜಿಲ್ಲೆಯಲ್ಲಿ ಟ್ರಕ್ಕಿಂಗ್‌ಗೆ ತೆರಳಿದ್ದರು.

ಟ್ರೆಕಿ ಗ್‌ಗಾಗಿ ತೆರಳಿದ್ದ ಇವರು ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡಿದ್ದರು.

ಇವರ ರಕ್ಷಣೆಗಾಗಿ ಭಾರತೀಯ ವಾಯುಪಡೆಯ ಎರಡು ವಿಶೇಷ ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌, ಸಚಿವ ಡಾ. ರಾಮ್‌ ಲಾಲ್‌ ಮಾರ್ಕಂಡ ಅವರು ಕುಲು ತಲುಪಿದ್ದು ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಪ್ರತೀಕೂಲ ಹವಾಮಾನ ಹಾಗೂ ಹಿಮಪಾತದಿಂದಾಗಿ 45 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಆದರೆ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.

ಟ್ರೆಕ್ಕಿಂಗ್‌ಗೆ ಹೋದವರು, ಪ್ರವಾಸಿಗರು ಮಾತ್ರವಲ್ಲಿ ಜನರಲ್‌ ರಿಸರ್ವ್‌ ಎಂಜಿನಿಯರ್‌ ಪಡೆ ಸಿಬ್ಬಂದಿ ಕೂಡ ಮಾರ್ಗ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದಾರೆ.

Comments are closed.