ಫೈಜಾಬಾದ್: ನವಜಾತ ಶಿಶುವೊಂದು ಆಪರೇಷನ್ ಟೇಬಲ್ ಮೇಲಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಗರದ ಸರಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಆ ಸಂದರ್ಭದಲ್ಲಿ ಮಗುವಿನ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು ಎಂದು ತಿಳಿದುಬಂದಿದೆ.
ಮಗುವಿನ ಸಾವಿಗೆ ವೈದ್ಯರು, ದಾದಿಯರು ಮತ್ತು ಆಸ್ಪತ್ರೆಯ ಇತರ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಗುವಿನ ಸಂಬಂಧಿಕರು ಆರೋಪಿಸಿದ್ದಾರೆ.
ಹೆರಿಗೆ ಮಾಡಿಸಲು ಹಣ ನೀಡಿ ಎಂದು ವೈದ್ಯರು ಮತ್ತು ನರ್ಸ್‌ಗಳು ಡಿಮ್ಯಾಂಡ್ ಮಾಡಿದ್ದರು. ಆದರೆ ನನ್ನಿಂದ ಹಣ ಪಾವತಿಸಲಾಗಲಿಲ್ಲ. ಹೀಗಾಗಿ ನನ್ನ ಪತ್ನಿಯ ಕಡೆಗೆ ಕಾಳಜಿ ವಹಿಸದ ಅವರು ಮಗುವನ್ನು ಟೇಬಲ್‌ನಿಂದ ತಳ್ಳಿ ಅಮಾನವೀಯತೆ ಮೆರೆದಿದ್ದಾರೆ. ಆಸ್ಪತ್ರೆಗೆ ದಾಖಲಾಗುವಾಗ ಪತ್ನಿ ಸಹಜ ಸ್ಥಿತಿಯಲ್ಲಿದ್ದಳು. ಬಳಿಕ ಅವಳ ಸ್ಥಿತಿ ಹದಗೆಟ್ಟಿತು. ನಾನು ವೈದ್ಯೆ ಪ್ರಿಯಾಂಕಾ ಜೈನ್ ಭೇಟಿಯಾಗಿ ಪತ್ನಿಗೆ ಚಿಕಿತ್ಸೆ ನೀಡುವಂತೆ ಕೇಳಿಕೊಂಡೆ. ಆದರವರು ವೈದ್ಯಕೀಯೇತರ ಸಿಬ್ಬಂದಿಗೆ ಸೂಚನೆ ನೀಡಿದರು ಎಂದು ಮಗುವಿನ ತಂದೆ ಭಾನು ಪ್ರತಾಪ್ ಶುಕ್ಲಾ ದೂರಿದ್ದಾರೆ.
Comments are closed.