ರಾಷ್ಟ್ರೀಯ

ಈತ ತನ್ನ ನಾಯಿಯ ಹೆಸರಲ್ಲಿ ರೇಷನ್‌ ಪಡೆಯುತ್ತಿದ್ದ!

Pinterest LinkedIn Tumblr


ಇಂಧೋರ್‌: ಸರಕಾರದಿಂದ ವಿತರಿಸುವ ಅಕ್ಕಿ-ಗೋಧಿಯನ್ನು ಮಗ ರಾಜುವಿಗೆಂದು ಕೊಂಡೊಯ್ಯುತ್ತಿದ್ದ ಅಜ್ಜನ ಮಗ ಯಾರೆಂದು ತಿಳಿದು ರೇಷನ್‌ ಅಧಿಕಾರಿಗಳು ಬೆಸ್ತು ಬಿದ್ದಿದ್ದಾರೆ.

ಇತ್ತೀಚಿನ ಬೆಳವಣಿಗೆಗೆ ಅನುಗುಣವಾಗಿ ರೇಷನ್‌ ಕಾರ್ಡ್‌ ಜತೆಗೆ ಆಧಾರ್‌ ಕಾರ್ಡ್‌ಅನ್ನು ಅಧಿಕಾರಿಗಳು ಕೇಳಿದ್ದಾರೆ. ಆದರೆ ಮಗ ರಾಜು ಎಂಬಾತ ಅಸ್ತಿತ್ವದ ಬಗ್ಗೆ ಆಧಾರ್‌ ಕಾರ್ಡ್‌ನಲ್ಲಿ ಲಭ್ಯವಾಗದ ಹಿನ್ನೆಲೆ ಅಧಿಕಾರಿಗಳು ಅನುಮಾನಗೊಂಡಿದ್ದಾರೆ. ಅಜ್ಜನ ಮನೆಗೆ ಅಧಿಕಾರಿಗಳು ತೆರಳಿ ‘ರಾಜು…’ ಎಂದು ಕೂಗಿದ್ದಾಗ ಬಾಲ ಅಲ್ಲಾಡಿಸುತ್ತ ಓಡಿ ಬಂದ ನಾಯಿಯನ್ನು ನೋಡಿ ಬೆಸ್ತು ಬಿದ್ದಿದ್ದಾರೆ.

ಮಧ್ಯ ಪ್ರದೇಶದ ಧಾರ್‌ ಜಿಲ್ಲೆಯ ಕುಗ್ರಾಮವೊಂದರ ನಿವಾಸಿ, 75 ವರ್ಷದ ನರ್ಸಿಂಗ್‌ ಬೋದಾರ್‌ ಎಂಬುವವರು ಕಳೆದ ಕೆಲವು ವರ್ಷಗಳಿಂದ ಸುಮಾರು 60 ಕೆಜಿ ಅಕ್ಕಿ ಮತ್ತು ಗೋಧಿಯನ್ನು ಮಗ ರಾಜು ಹೆಸರಲ್ಲಿ ಕೊಂಡೊಯ್ಯುತ್ತಿದ್ದರು.

ರೇಷನ್‌ ಕಾರ್ಡ್‌ನಲ್ಲಿ ಪತ್ನಿ ಮತ್ತು ಮಗನ ಹೆಸರು ದಾಖಲಿಸಿರುವ ನರ್ಸಿಂಗ್‌ ಕಳೆದೊಂದು ವರ್ಷದಿಂದ ಆಹಾರ ಧಾನ್ಯ ಸಾಗಿಸುತ್ತಿದ್ದರು. ಸ್ಥಳೀಯ ಪಂಚಾಯಿತಿಯಲ್ಲೇ ರೇಷನ್‌ ಕಾರ್ಡ್‌ ತಯಾರಿಸಿರುವುದು ಪ್ರಕರಣದೊಂದಿಗೆ ಬೆಳಕಿಗೆ ಬಂದಿದೆ.

Comments are closed.