ರಾಷ್ಟ್ರೀಯ

ಶಂಕಿತ ಆಸ್ತಿ ವಿವಾದಕ್ಕೆ ಬಲಿಯಾದ ಸಾಕುನಾಯಿ

Pinterest LinkedIn Tumblr


ಜೈಪುರ: ಶಂಕಿತ ಆಸ್ತಿ ವಿವಾದದಕ್ಕೆ ನಾಯಿಯೊಂದು ಬಲಿಯಾದ ಹೃದಯವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ನಗರದ ಬ್ರಹ್ಮಪುರಿ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಈ ಕೃತ್ಯ ನಡೆದಿದ್ದು, ನಾಯಿಯನ್ನು ಕಳೆದುಕೊಂಡ ವೃದ್ಧಜೀವ ಆಘಾತಗೊಂಡಿದೆ.

ಜೈ ಸಿಂಗ್ ಪುರಾ ಸ್ಥಳದಲ್ಲಿರುವ ದೇವಸ್ಥಾನದಲ್ಲಿ ಪೂಜಾರಿ ವೃತ್ತಿಯಲ್ಲಿರುವ ಹನುಮಾನ್ ದಾಸ್ (65) ದೇವಸ್ಥಾನಕ್ಕೆ ಹೊಂದಿಕೊಂಡಿರುವ ಕೋಣೆಯಲ್ಲಿ ವಾಸ ಮಾಡುತ್ತಿದ್ದರು. ಗುರುವಾರ ನಸುಕಿನ ಜಾವ 2.30ಕ್ಕೆ ತನ್ನ ಕೋಣೆಯ ಹೊರಗಡೆ ಕೆಲವರು ಅನುಮಾನಾಸ್ಪದವಾಗಿ ಸುತ್ತಾಡುತ್ತಿರುವುದು ಅವರ ಗಮನಕ್ಕೆ ಬಂತು. ಬಾಗಿಲು ತೆರೆಯುವಂತೆ ಕೂಗಿಕೊಂಡರು ಸಹ ತನ್ನನ್ನು ಸಾಯಿಸಲು ಬಂದಿದ್ದನ್ನು ಅರಿತಿದ್ದ ಪೂಜಾರಿ ಒಳಗಿನ ಚಿಲಕವನ್ನು ಭದ್ರಪಡಿಸಿಕೊಂಡರು. ಹೊರಗೆ ಕಟ್ಟಿ ಹಾಕಲಾಗಿದ್ದ ನಾಯಿ ಮಾತ್ರ ದುಷ್ಕರ್ಮಿಗಳಿಗೆ ಬೊಗಳುತ್ತಲೇ ಇತ್ತು. ಪೂಜಾರಿಯನ್ನು ಕೊಲ್ಲಲು ವಿಫಲರಾದ ದುಷ್ಕರ್ಮಿಗಳು ನಾಯಿಯನ್ನು ಕೊಂದು ಪರಾರಿಯಾಗಿದ್ದಾರೆ.

ಕೊಲ್ಲಲು ಬಂದಿದ್ದವರು ಭೂಗಳ್ಳರಾಗಿರಬಹುದು ಅಥವಾ ಕುಡಿದ ಮತ್ತಿನಲ್ಲಿದ್ದವರಾಗಿರಬಹುದು ಎಂದು ಎಂದು ಪೂಜಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಭಯದಿಂದ ನಾನು ಬೆಳಕಾಗುವವರೆಗೆ ಮನೆಯಿಂದಾಚೆ ಕಾಲಿಡಲೇ ಇಲ್ಲ. ಬೆಳಗೆದ್ದು ಹೊರಬಂದಾಗ ನನ್ನ ಮುದ್ದು ನಾಯಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕಳೆದ ವರ್ಷಗಳಿಂದ ನನ್ನ ಸಂಗಾತಿಯಾಗಿದ್ದ ನಾಯಿಯನ್ನು ಬರ್ಬರವಾಗಿ ಸಾಯಿಸಿದ್ದರು. ನಾನು ಬ್ರಹ್ಮಚಾರಿಯಾಗಿದ್ದು ಒಂಟಿಯಾಗಿದ್ದ ನನಗೆ ಹಿರಿಯ ಅಧಿಕಾರಿಗಳು ನಾಯಿಯನ್ನು ಉಡುಗೊರೆಯಾಗಿ ನೀಡಿದ್ದರು. ಅವನಿಗೆ ಅನ್ನ ಹಾಕಿದ್ದಕ್ಕೆ ಪ್ರತಿಯಾಗಿ ಸದಾ ನನ್ನ ಕಾವಲು ಕಾಯುತ್ತಿತ್ತು ಎಂದು ಗದ್ಗದಿಸುತ್ತಾರೆ ದಾಸ್.

ಭೂಗಳ್ಳರಿಂದ ನನಗೆ ಸದಾ ಜೀವಬೆದರಿಕೆ ಇದ್ದು, ನನ್ನ ಬೆದರಿಸಲು ನಾಯಿಯನ್ನು ಕೊಲೆಗೈಯ್ಯಲಾಗಿದೆ ಎಂದವರು ದೂರಿದ್ದಾರೆ.

Comments are closed.