ರಾಷ್ಟ್ರೀಯ

ರಾಮ ಮಂದಿರ ನಿರ್ಮಾಣವನ್ನು ವಿಪಕ್ಷಗಳು ಕೂಡ ವಿರೋಧಿಸುವುದಿಲ್ಲ: ಭಾಗವತ್

Pinterest LinkedIn Tumblr


ಹರಿದ್ವಾರ: ವಿಪಕ್ಷಗಳು ಕೂಡ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವುದಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ದೇಶದ ಬಹುಸಂಖ್ಯಾತರ ಆಶಯದಂತೆ ರಾಮ ಮಂದಿರ ನಿರ್ಮಾಣವಾಗಲಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ರಾಮ ಮಂದಿರ ನಿರ್ಮಾಣ ಮಾಡಲು ಬದ್ಧವಾಗಿವೆ. ಆದರೆ ಆಯೋಧ್ಯೆಯಲ್ಲಿನ ಕೆಲವೊಂದು ತೊಡಕುಗಳಿಂದಾಗಿ ಮಂದಿರ ನಿರ್ಮಾಣ ಸ್ವಲ್ಪ ತಡವಾಗಬಹುದು. ಸರಕಾರಕ್ಕೂ ಅದರದೇ ಆದ ಕೆಲವೊಂದು ನಿರ್ಬಂಧಗಳಿರುತ್ತವೆ ಎಂದು ಭಾಗವತ್ ತಿಳಿಸಿದ್ದಾರೆ.

ಪತಂಜಲಿ ಯೋಗಪೀಠ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ವಿಪಕ್ಷಗಳು ಕೂಡ ನೇರವಾಗಿ ಮಂದಿರ ನಿರ್ಮಾಣವನ್ನು ವಿರೋಧಿಸುವುದಿಲ್ಲ. ಯಾಕೆಂದರೆ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ದೇಶದ ಬಹುಸಂಖ್ಯಾತರಾದ ಹಿಂದುಗಳ ನಿರ್ಣಯ ಮತ್ತು ಆಶಯವಾಗಿದೆ, ವಿಪಕ್ಷಗಳಿಗೆ ಅದು ತಿಳಿದಿದೆ. ಹೀಗಾಗಿ ಅವರು ವಿರೋಧಿಸುವುದಿಲ್ಲ ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

Comments are closed.