ರಾಷ್ಟ್ರೀಯ

ಗುಜರಾತ್ ನಲ್ಲಿನ 23 ಸಿಂಹಗಳ ಸಾವಿನ ಕಾರಣ ಪತ್ತೆ ಹಚ್ಚಿದ ಐಸಿಎಂಆರ್

Pinterest LinkedIn Tumblr


ನವದೆಹಲಿ: ಗುಜರಾತಿನ ಗಿರ್ ಅಭಯಾರಣ್ಯದಲ್ಲಿ ಸಿಂಹಗಳ ಸಾವು ಭಾರಿ ಸುದ್ದಿಯನ್ನು ಮಾಡಿತ್ತು ಅಲ್ಲಿದೆ ಇಲ್ಲಿನ ಸರಣಿ ಸಿಂಹಗಳ ಸಾವು ನಿಜಕ್ಕೂ ಅರಣ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿತ್ತು. ಆದರೆ ಈಗ ಈ ಸಿಂಹಗಳ ಸಾವಿಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಶುಕ್ರವಾರದಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ವೈರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಂಸ್ಥೆಯು ಗಿರ್ ಅಭಯಾರಣ್ಯದಲ್ಲಿ 23 ಸಿಂಹಗಳ ಸಾವಿಗೆ ಕಾರಣವಾದ ವೈರಸ್ ಅನ್ನು ಪತ್ತೆಮಾಡಿದೆ.

ಈಗ ಪತ್ತೆಯಾಗಿರುವ ವೈರಸ್ ಈ ಹಿಂದೆ ಪೂರ್ವ ಆಫ್ರಿಕಾದಲ್ಲಿ ಶೇ. 30 ರಷ್ಟು ಸಿಂಹದ ಜನಸಂಖ್ಯೆ ನಾಶವಾಗಲು ಕಾರಣ ಎಂದು ಐಸಿಎಂಆರ್ ಹೇಳಿದೆ.ಈಗ ಉಳಿದಿರುವ ಸಿಂಹಗಳನ್ನು ರಕ್ಷಿಸಲು ತಕ್ಷಣದ ಕ್ರಮಗಳನ್ನು ಕೇಂದ್ರ ಸರ್ಕಾರವು ತಗೆದುಕೊಳ್ಳಬೇಕು ಅದರಲ್ಲಿ ಪ್ರಮುಖವಾಗಿ ವಿವಿಧ ಅಭಯಾರಣ್ಯಗಳಿಗೆ ಸಿಂಹಗಳನ್ನು ಸ್ಥಳಾಂತರಿಸುವ ಮೂಲಕ ಅವುಗಳನ್ನು ರಕ್ಷಿಸಬೇಕು ಎಂದು ಐಸಿಎಂಆರ್ ಹೇಳಿದೆ.

ಪುಣೆ ಮೂಲದ ಐಸಿಎಂಆರ್-ಎನ್ಐವಿ ಸಂಸ್ಥೆಯು ಗುಜರಾತಿನ ಗಿರ್ ಕಾಡಿನಲ್ಲಿ ಐದು ಏಶಿಯಾ ಸಿಂಹಗಳ ಸಾವಿಗೆ ಕಾರಣವಾದ ಸಿಡಿವಿ ಪತ್ತೆ ಮಾಡಿದೆ.ಮೊದಲ ಬಾರಿಗೆ ಸಿಡಿವಿ ಯ ಸಂಪೂರ್ಣ ಜೀನೋಮ್ ಎನ್ಐವಿ ವಶಪಡಿಸಿಕೊಂಡಿದೆ ಎಂದು ಐಸಿಎಂಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಈಗ ವೈರಸ್ ನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಅಮೆರಿಕಾದ ಮೂಲಕ 300ಕ್ಕೂ ಅಧಿಕ ಸಿ.ಡಿ.ವಿ ಲಸಿಕೆಗಳನ್ನು ಶುಕ್ರವಾರದಂದು ಆಮದು ಮಾಡಿಕೊಳ್ಳಲಾಗಿದೆ.

Comments are closed.