ನವದೆಹಲಿ: ಯುವಕರ ಜೊತೆ ಸೇರಿ 19 ವರ್ಷದ ಯುವತಿ ಮತ್ತೋರ್ವ ಯುವತಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ದೆಹಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸೆಕ್ಸ್ ಟಾಯ್ ಬಳಸಿ 19 ವರ್ಷದ ಯುವತಿ ಹಾಗೂ ಆಕೆಯ ಜೊತೆಗಿದ್ದ ಇಬ್ಬರು ಪುರುಷರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು 25 ವರ್ಷದ ಯುವತಿ ದೆಹಲಿಯ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಮಹಿಳೆಯನ್ನು ಪೊಲೀಸರು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಹಾಜರುಪಡಿಸಿದ್ದರು. ಈ ವೇಳೆ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ತಮ್ಮ ಮೇಲಾದ ಅತ್ಯಾಚಾರದ ಕುರಿತು ಹೇಳಿಕೊಂಡಿದ್ದಾರೆ.
ನಂತರ ಸೀಮಾಪುರಿ ಪೊಲೀಸರು ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ಹಾಗೂ ಯುವತಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
ಸಂತ್ರಸ್ತ ಯುವತಿ ಗುರಗ್ರಾಮದ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲಸ ಬಿಟ್ಟು ಸ್ವಂತ ಉದ್ಯಮವನ್ನು ಶುರುಮಾಡಲು ಯೋಚಿಸುತ್ತಿದ್ದರು. ಇದೇ ವೇಳೆ 19 ವರ್ಷದ ಯುವತಿಯೊಬ್ಬಳು ತಾನು ಐಟಿ ಕಂಪೆನಿಯ ಉದ್ಯಮಿಯೆಂದು ಮಹಿಳೆಗೆ ಪರಿಚಯಿಸಿಕೊಂಡಿದ್ದಳು. ಆಕೆಯ ಜೊತೆ ಇಬ್ಬರು ಸ್ನೇಹಿತರನ್ನು ಸಹ ಸಂತ್ರಸ್ತೆಗೆ ಪರಿಚಯ ಮಾಡಿಕೊಟ್ಟಿದ್ದಳು. ಹೀಗಾಗಿ ನಾಲ್ವರು ಸೇರಿಕೊಂಡು ಸ್ವಂತ ಉದ್ಯಮ ಪ್ರಾರಂಭ ಮಾಡಲು ಕುರಿತು ಮಾತುಕತೆ ನಡೆಸುತ್ತಿದ್ದರು.
ಮಾತುಕತೆ ನಡೆಸಲು ದೆಹಲಿಯ ದಿಲ್ ಶಾದ್ ಅಪಾರ್ಟ್ ಮೆಂಟ್ ಬರಲು 19ರ ಯುವತಿ ಹಾಗೂ ಆಕೆಯ ಇಬ್ಬರು ಸ್ನೇಹಿತರು ಮಹಿಳೆಯನ್ನು ಕರೆದಿದ್ದರು. ಅಪಾರ್ಟ್ ಮೆಂಟ್ ಗೆ ತೆರಳಿದ ಸಂತ್ರಸ್ತೆಯನ್ನು ರೂಮಿನಲ್ಲಿ ಕೂಡಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಆಕೆಯ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರ ಮಾಡಿದ್ದರು.
ಅತ್ಯಾಚಾರದ ವಿಡಿಯೋ ಮಾಡಿದ್ದ ಯುವತಿ ಘಟನೆ ಕುರಿತು ಬಾಯಿಬಿಟ್ಟರೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಬಗ್ಗೆ ಮಹಿಳೆಗೆ ಬೆದರಿಕೆ ಹಾಕಿದ್ದಳು. ಅಲ್ಲದೇ ಅತ್ಯಾಚಾರದ ಬಳಿಕ ಯುವತಿ ಸೆಕ್ಸ್ ಟಾಯ್ ಗಳನ್ನು ಬಳಸಿ ಮಹಿಳೆ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಳು.
Comments are closed.