ರಾಷ್ಟ್ರೀಯ

ಡಾಲರ್ ಎದುರು ಮತ್ತೆ ಇಳಿಕೆ ಕಂಡ ರೂಪಾಯಿ !

Pinterest LinkedIn Tumblr

ಮುಂಬೈ: ವಾರದ ಆರಂಭದ ದಿನವಾದ ಸೋಮವಾರ ಬೆಳಗ್ಗೆ ವಹಿವಾಟು ಆರಂಭದಲ್ಲಿ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 14 ಪೈಸೆ ಮತ್ತೆ ಇಳಿಕೆಯಾಗಿ ಪ್ರತಿ ಡಾಲರ್ ಎದುರು ರೂಪಾಯಿ ಮೌಲ್ಯ 73 ರೂಪಾಯಿ 90 ಪೈಸೆಯಷ್ಟಾಗಿದೆ.

ಚೀನಾದ ಕೇಂದ್ರೀಯ ಬ್ಯಾಂಕು ದೇಶದ ಆರ್ಥಿಕತೆಗೆ ಸಹಾಯ ಮಾಡಲು ತನ್ನ ದೇಶೀಯ ನೀತಿಯನ್ನು ಸುಲಭಗೊಳಿಸಿದ ಕಾರಣ ಡಾಲರ್ ಬೆಲೆ ಅಧಿಕವಾಗಿದೆ.

ಅಮೆರಿಕಾದೊಂದಿಗೆ ವ್ಯಾಪಾರ ಕದನವನ್ನು ಮುಂದುವರಿಸಿರುವ ಸಂದರ್ಭದಲ್ಲಿ ಚೀನಾದ ಕೇಂದ್ರ ಬ್ಯಾಂಕ್, ಅನುಪಾತ ಅವಶ್ಯಕತೆ ಪ್ರಮಾಣ(ಆರ್ ಆರ್ ಆರ್)ನ್ನು ಶೇಕಡಾ 1ರಷ್ಟು ಅಕ್ಟೋಬರ್ 15ರಿಂದ ಕಡಿತಗೊಳಿಸಲಿದ್ದು ಅದು 109.2 ಶತಕೋಟಿ ಡಾಲರ್ ನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿಸಲಿದೆ.

ಕಳೆದ ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯ ಅತ್ಯಂತ ಕುಸಿತ ಕಂಡುಬಂದು 18 ಪೈಸೆಯಷ್ಟು ಕಡಿತವಾಗಿತ್ತು. ಕಳೆದ ನಾಲ್ಕು ವ್ಯಾಪಾರ ಅವಧಿಗಳಲ್ಲಿ ಭಾರತದ ಹೂಡಿಕೆ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು 9,300 ಕೋಟಿ ರೂಪಾಯಿಗಳನ್ನು ಹೊರಹಾಕಿದ್ದಾರೆ.

ಈ ಮಧ್ಯೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಇಂದು ಸಂವೇದಿ ಸೂಚ್ಯಂಕ 67.72 ಅಂಕಗಳ ಕುಸಿತ ಕಂಡುಬಂದಿದ್ದು ಬೆಳಗಿನ ವೇಳೆ 34,309.30ರಲ್ಲಿ ವಹಿವಾಟು ನಡೆಸುತ್ತಿತ್ತು.

Comments are closed.