ರಾಷ್ಟ್ರೀಯ

ಗುಜರಾತ್‌ನಲ್ಲಿ ಬಿಹಾರಿಗಳ ಮೇಲೆ ಹಲ್ಲೆ: ರಕ್ಷಣೆ ಕ್ರಮ ತೆಗೆದುಕೊಳ್ಳಲಾಗುವುದು ಎಂದ ನಿತೀಶ್‌ ಕುಮಾರ್

Pinterest LinkedIn Tumblr


ಪಟನಾ: ಗುಜರಾತ್‌ನಲ್ಲಿ ಹೊರ ರಾಜ್ಯದಿಂದ ಬಂದವರ ಮೇಲೆ ಹಲ್ಲೆ ನಡೆಸಿ, ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಗುಜರಾತ್‌ನಲ್ಲಿರುವ ಬಿಹಾರ್ ರಾಜ್ಯದ ಜನರ ಸುರಕ್ಷತೆ ಬಗ್ಗೆ ಗುಜರಾತ್‌ ಸಿಎಂ ವಿಜಯ್‌ ರುಪಾನಿ ಬಳಿ ಮಾತುಕತೆ ನಡೆಸಿರುವುದಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

14ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಬಿಹಾರ ಮೂಲದ ಆರೋಪಿಗೆ ಮರಣ ದಂಡನೆ ವಿಧಿಸಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನೆ, ಹಿಂಸಾರೂಪಕ್ಕೆ ತಿರುಗಿದ್ದು, ಅನ್ಯ ಸಮುದಾಯ, ಅದರಲ್ಲೂ ಬಿಹಾರದಿಂದ ಬಂದವರನ್ನು ಗುರಿಯಾಗಿಸಿ, ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ತಪ್ಪಿತಸ್ಥರು ಯಾರೇ ಆಗಿರಲಿ, ಯಾವುದೇ ಪ್ರದೇಶಕ್ಕೆ ಸೇರಿರಲಿ, ಅವರಿಗೆ ಶಿಕ್ಷೆಯಾಗಬೇಕು. ಆದರೆ ತಪ್ಪಿತಸ್ಥನ ಪ್ರದೇಶದಿಂದ ಬಂದವರೆಂದು ಇಡೀ ಸಮುದಾಯದ ಮೇಲೆ ಹಲ್ಲೆಗೆ ಮುಂದಾಗುವುದು ಸರಿಯಲ್ಲ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಅವರು ಹೇಳಿದರು.

ಘಟನೆ ಸಂಬಂಧ ಈಗಾಗಲೇ ಗುಜರಾತ್‌ ಸರಕಾರ ಹಾಗೂ ಅಲ್ಲಿನ ಅಧಿಕಾರಿಗಳೊಂದಿಗೆ ಸಂರ್ಪದಲ್ಲಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಅನ್ಯ ಸಮುದಾಯಕ್ಕೆ ಸೇರಿದವರ ಮೇಲೆ ಹಲ್ಲೆ ನಡೆಸಿದ್ದ ಸುಮಾರು 342 ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

Comments are closed.