ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ವಿಷ್ಣುವಿನ 11ನೇ ಅವತಾರವೆಂದ ಬಿಜೆಪಿ ವಕ್ತಾರ

Pinterest LinkedIn Tumblr


ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ವಿಷ್ಣುವಿನ 11ನೇ ಅವತಾರ, ಅವರಿಗೆ ಪೂಜ್ಯ ಸ್ಥಾನ ನೀಡಬೇಕು, ಅವರನ್ನು ದೇವತಾ ಭಾವದಿಂದ ಕಾಣಬೇಕು ಎಂದು ಮಹಾರಾಷ್ಟ್ರ ಬಿಜೆಪಿ ವಕ್ತಾರ ಹೇಳಿದ್ದಾರೆ.

ಬಿಜೆಪಿ ನಾಯಕ ಅವಧೂತ್ ವಾಘ್ ಪ್ರಕಾರ, ಪ್ರಧಾನಿ ಮೋದಿ ವಿಷ್ಣುವಿನ ಅವತಾರವೆತ್ತಿ ಬಂದಿದ್ದಾರೆ. ವಿಷ್ಣು 10 ಅವತಾರ ಪೂರೈಸಿ, 11ನೇ ಅವತಾರದಲ್ಲಿ ಪ್ರಧಾನಿ ಮೋದಿಯಾಗಿ ಜನ್ಮ ತಾಳಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ಅವಧೂತ್, ಸಂಸ್ಕೃತ ಶ್ಲೋಕ ಯದಾ ಯದಾ ಹಿ ಧರ್ಮಸ್ಯ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Comments are closed.