ರಾಷ್ಟ್ರೀಯ

ಗಂಡನ ಕಾಯುತ್ತಿದ್ದ ಗರ್ಭಿಣಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!

Pinterest LinkedIn Tumblr


ಮಿಡ್ನಾಪುರ್(ಪಶ್ಚಿಮಬಂಗಾಳ): ಗಂಡನಿಗೆ ಪ್ರಿಯವಾದ ಅಡುಗೆ ಮಾಡಿಟ್ಟು ಆತನ ಬರುವಿಕೆಗಾಗಿ ಕಾಯುತ್ತಿದ್ದ ಗರ್ಭಿಣಿ ಮಹಿಳೆ ಮನೆಗೆ ನುಗ್ಗಿದ ಮೂವರು ಕಾಮಾಂಧರು ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.
ಕಳೆದ ಬುಧವಾರ ರಾತ್ರಿ ತನ್ನ ಮನೆಯಲ್ಲಿ ಗಂಡನ ಬರುವಿಕೆಗಾಗಿ ಕಾಯುತ್ತಿದ್ದ 28 ವರ್ಷದ ಗರ್ಭೀಣಿ ಮಹಿಳೆ ಮೂವರು ಅತ್ಯಾಚಾರವೆಸಗಿರುವುದಾಗಿ ಅಸ್ಸಾನ್ಸೋಲ್ ದುರ್ಗಾಪುರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಗಿ ಪೊಲೀಸರು ಹೇಳಿದ್ದಾರೆ.
ಮನೆಯಲ್ಲಿ ಒಂಟಿಯಾಗಿದ್ದನ್ನು ತಿಳಿದ ಮೂವರು ಬಂದು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಬಲವಂತವಾಗಿ ಒಳಗೆ ನುಗ್ಗಿದ ಮೂವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಮೆಕ್ಯಾನಿಕ್ ಆಗಿದ್ದ ಪತಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಹೆಂಡತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಕೂಡಲೇ ಆತ ಪೊಲೀಸರಿಗೆ ಬಂದ ದೂರು ನೀಡಿದ್ದಾರೆ. ಇನ್ನು ಅತ್ಯಾಚಾರಿಗಳ ಪೈಕಿ ಒಬ್ಬನ ಹೆಸರು ಕುಲದೀಪ್ ಸಿಂಗ್ ಎಂದಾಗಿದ್ದು ಮತ್ತಿಬ್ಬರ ಬಗ್ಗೆ ಇನ್ನು ತಿಳಿದುಬಂದಿಲ್ಲ.

Comments are closed.