ರಾಷ್ಟ್ರೀಯ

ಜಗತ್ತಿನ ಅತಿ ಭಾರದ 33.5 ಕೆಜಿ ತೂಕದ ಅಂಡಾಶಯದ ಕ್ಯಾನ್ಸರ್ ಗಡ್ಡೆ ಶಸ್ತ್ರಚಿಕಿತ್ಸೆ ಯಶಸ್ವಿ

Pinterest LinkedIn Tumblr


ಕೊಯಮತ್ತೂರು: ಅಂಡಾಶಯದಲ್ಲಿ 33.5 ಕೆಜಿ ತೂಕದ ಕ್ಯಾನ್ಸರ್ ಗಡ್ಡೆ ಹೊಂದಿದ್ದ ಮಹಿಳೆಯೋರ್ವರಿಗೆ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಮಹಿಳೆ ಊಟಿಯ ಆಸ್ಪತ್ರೆಯಲ್ಲಿ ಹೊಟ್ಟೆನೋವು ಎಂದು ಪರೀಕ್ಷೆ ಮಾಡಿಸಿಕೊಂಡಿದ್ದರು. ಆದರೆ ಆ ಸಂದರ್ಭದಲ್ಲೇ ಹೊಟ್ಟೆ ಸ್ವಲ್ಪ ದಪ್ಪನಾಗಿ ಕಂಡುಬಂದಿತ್ತು. ಆದರೆ ಅದು ವಯೋಸಹಜ ಎಂದು ಆಕೆ ನಿರ್ಲಕ್ಷಿಸಿದ್ದರು.

ಆದರೆ ಕಳೆದ ಎರಡು ವರ್ಷಗಳಿಂದ ಗಡ್ಡೆ ಬೆಳೆಯುತ್ತಿದ್ದು, ಕೊನೆಗೆ ಅದು ದೊಡ್ಡದಾಗಿ 30 ಕೆ.ಜಿಗೂ ಅಧಿಕ ಭಾರ ಹೊಂದಿತ್ತು.

ಹೀಗಾಗಿ ಮಹಿಳೆಗೆ ನಡೆದಾಡಲು ಮತ್ತು ಕೂರಲೂ ಸಮಸ್ಯೆಯಾಗುತ್ತಿತ್ತು. ನಂತರ ಆಕೆಯನ್ನು ಊಟಿಯ ಆಸ್ಪತ್ರೆಯಿಂದ ಕೊಯಮತ್ತೂರಿನ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಮಹಿಳೆ ಕೊಯಮತ್ತೂರಿನ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

33.5 ಕೆ.ಜಿ. ತೂಕದ ಗಡ್ಡೆಯಿದ್ದಿದ್ದರಿಂದ ವೈದ್ಯರು ಅತ್ಯಂತ ಎಚ್ಚರ ವಹಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಮೂರೂವರೆ ಗಂಟೆ ಸಮಯ ತಗುಲಿದೆ.
ಶಸ್ತ್ರಚಿಕಿತ್ಸೆಗೆ ಮೊದಲು 75 ಕೆ.ಜಿ. ತೂಕವಿದ್ದ ಮಹಿಳೆ, ಗಡ್ಡೆ ತೆಗೆದ ಬಳಿಕ 42.2 ಕೆ.ಜಿ ತೂಕ ಹೊಂದಿದ್ದಾರೆ.

ವಿಶ್ವದಲ್ಲೇ ಅತಿ ಭಾರದ ಅಂಡಾಶಯದ ಕ್ಯಾನ್ಸರ್ ಗಡ್ಡೆ ಇದಾಗಿದ್ದು, ಶಸ್ತ್ರಚಿಕಿತ್ಸೆಯು ಏಷ್ಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಗಿನ್ನೆಸ್‌ ಬುಕ್‌ನಲ್ಲೂ ಇದು ದಾಖಲಾಗಲಿದೆ.

Comments are closed.