ರಾಷ್ಟ್ರೀಯ

ಕಳಪೆ ದರ್ಜೆಯ ಜ್ಯೂಸ್: ಮಾರಾಟಗಾರನಿಗೆ ಶಿಕ್ಷೆ

Pinterest LinkedIn Tumblr


ಭೋಪಾಲ್: ಆಹಾರದ ಕಲಬೆರಕೆ ಮತ್ತು ಕಳಪೆ ದರ್ಜೆಯ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿದ್ದ ಮಧ್ಯ ಪ್ರದೇಶದ ಭೋಪಾಲ್‌ನ ಜ್ಯೂಸ್ ಮಾರಾಟಗಾರನೋರ್ವನಿಗೆ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿದೆ.

ಜ್ಯೂಸ್ ಮಳಿಗೆಯಲ್ಲಿ ಕಳಪೆ ಅನಾನಸನ್ನು ಬಳಸಿ ಅದರಿಂದ ಜ್ಯೂಸ್ ತಯಾರಿಸಲಾಗುತ್ತಿತ್ತು. ಈ ಬಗ್ಗೆ ಗ್ರಾಹಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಫುಡ್‌ ಇನ್ಸ್‌ಪೆಕ್ಟರ್‌ ಭೋಜರಾಜ್ ಸಿಂಗ್ ಧಕಡ್ 2009ರ ಏ. 30ರಂದು ಭೋಪಾಲ್‌ನ ಹಬೀಬ್‌ಗಂಜ್ ಕ್ರಾಸಿಂಗ್ ಸಮೀಪದ ಖಾಲ್ಸಾ ಜ್ಯೂಸ್ ಸೆಂಟರ್‌ಗೆ ದಾಳಿ ನಡೆಸಿ, ಜ್ಯೂಸ್ ಮಾಡಲು ಬಳಸುತ್ತಿದ್ದ ಅನಾನಸು ಸಹಿತ ವಿವಿಧ ಹಣ್ಣುಗಳ ಬಗ್ಗೆ ಮಾದರಿ ಸಂಗ್ರಹಿಸಿದ್ದರು.

ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ಅಂಗಡಿ ಮಾಲೀಕ ಪ್ರೀತಂ ಸಿಂಗ್ ವಿರುದ್ಧ ಆಹಾರ ಕಲಬೆರಕೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಪ್ರಕಾಶ್ ಕುಮಾರ್ ಉಕೆ ಆರೋಪಿ ಪ್ರೀತಂ ತಪ್ಪಿತಸ್ಥನೆಂದು ಘೋಷಿಸಿದ್ದು, ಗ್ರಾಹಕರ ನಂಬಿಕೆಗೆ ವಿರುದ್ಧವಾಗಿ ಕಳಪೆ ಜ್ಯೂಸ್ ನೀಡುತ್ತಿದ್ದ ಎಂದು ದಂಡ ಮತ್ತು ಜೈಲು ಶಿಕ್ಷೆ ವಿಧಿಸಿದ್ದಾರೆ.

Comments are closed.