ರಾಷ್ಟ್ರೀಯ

ದಕ್ಷಿಣ ಭಾರತದ ಭೇಟಿಗಿಂತ ಪಾಕಿಸ್ತಾನದ ಭೇಟಿ ನನಗೆ ಹೆಚ್ಚು ಖುಷಿ ಕೊಟ್ಟಿದೆ : ವಿವಾದಕ್ಕೆ ಕಾರಣವಾಗಿರುವ ನವಜೋತ್ ಸಿಂಗ್ ಸಿಧು ಹೇಳಿಕೆ

Pinterest LinkedIn Tumblr

ನವದೆಹಲಿ: ಭಾಷೆ ಹಾಗೂ ಆಹಾರ ವಿಚಾರದಲ್ಲಿ ದಕ್ಷಿಣ ಭಾರತಕ್ಕಿಂತಲೂ ಪಾಕಿಸ್ತಾನ ಮೇಲು ಎಂದು ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನಜೋತ್ ಸಿಂಗ್ ಸಿಧು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಪಾಕ್ ಮೇಲಿನ ತಮ್ಮ ಒಲವನ್ನು ಇನ್ನೊಮ್ಮೆ ಬಹಿರಂಗಪಡಿಸಿದ್ದಾರೆ.

ದಕ್ಷಿಣ ಭಾರತದ ಭೇಟಿಗಿಂತ ಪಾಕಿಸ್ತಾನದ ಭೇಟಿ ನನಗೆ ಹೆಚ್ಚು ಖುಷಿ ಕೊಟ್ಟಿದೆ ಎಂದು ಸಿಧು ಹೇಳಿದ್ದಾರೆ. ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಧು ಈ ಹೇಳಿಕೆ ನೀಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ.

“ನಾನು ದಕ್ಷಿಣ ಬಾರತಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಭಾಷೆ, ಆಹಾರ ಶೈಲಿ ಎಲ್ಲವೂ ಭಿನ್ನವಾಗಿದ್ದು ನನಗೆ ಅಲ್ಲಿನ ಭಾಷೆ ಅರ್ಥೈಸಿಸ್ಕೊಳ್ಳುವುದು ಕಠಿಣವಾಗಿತ್ತು. ಅದೇ ಪಾಕಿಸ್ತಾನಕ್ಕೆ ಹೋದಾಗ ಅಲ್ಲಿ ಎಲ್ಲವೂ ಒಂದೇ ಆಗಿತ್ತು. ಆಂಗ್ಲ ಭಾಷೆಯಲ್ಲಿ ಹತ್ತು ಬಾರಿ ಬೈಯುವುದಕ್ಕೆ ಬದಲು ಪಂಜಾಬಿಯಲ್ಲಿ ಒಂದೇ ಬಾರಿ ಬೈಯ್ದರೆ ಉತ್ತಮ” ಎಂದು ಅವರು ಹೇಳಿದ್ದಾರೆ.

ಅಲ್ಲದೆ ಸಿಧು ಪಾಕ್ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡ ವಿಚಾರಕ್ಕೆ ಸಂಬಂಧಿಸಿ ಸಮರ್ಥನೆ ನೀಡಿದ್ದಾರೆ. ತನಗೆ ಪಾಕ್ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡ ಬಗ್ಗೆ ಯಾವ ಮುಜುಗರವಿಲ್ಲ ಎಂದಿದ್ದು ಪಾಕ್ ಸೇನೆ ಪಂಜಾಬಿ ಸಮುದಾಯದವರಿಗೆ ಪಾಕಿಸ್ತಾನದಲ್ಲಿರುವ ಕರತಾರ್ ಪುರ ಗುರುದ್ವಾರಕ್ಕೆ ತೆರಳಲು ಗಡಿಯನ್ನು ಮುಕ್ತಗೊಳಿಸುವುದಾಗಿ ಭರವಸೆ ಇತ್ತಿದ್ದರು.ಇದಕ್ಕಾಗಿ ನಾನು ಅವರನ್ನು ತಬ್ಬಿಕೊಂಡಿದ್ದೆ ಎಂದಿದ್ದಾರೆ.

ಸಿಧು ಹೇಳಿಕೆ ಕುರಿತಂತೆ ಅನೇಕರು ಖಾರವಾಗಿ ಪ್ರತಿಕ್ರಯಿಸಿದ್ದು ಪಂಜಾಬ್ ಅಕಾಲಿ ದಳದ ಹಿರಿಯ ಮುಖಂಡ ಹೇಳುವಂತೆ ಸಿಧು ಭಾರತವನ್ನು ತುಳಿಯಲಿಕ್ಕಾಗಿ ಪಾಕಿಸ್ತಾನವನ್ನು ಹೊಗಲಿದ್ದಾರೆ ಎಂದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ನಳಿನ್ ಕೊಹ್ಲಿ ಮಾತನಾಡಿ ಸಿಧು ದಕ್ಷಿಣ ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸಿರುವುದು ಖಂಡನಾರ್ಹವಾಗಿದೆ ಎಂದರು.

Comments are closed.