ರಾಷ್ಟ್ರೀಯ

ಶಬರಿಮಲೆಗೆ ಮಹಿಳೆಯರ ಪ್ರವೇಶ; ಬಿಜೆಪಿಯಿಂದ ಕೇರಳ ಸರ್ಕಾರಕ್ಕೆ 24 ತಾಸು ಗಡುವು

Pinterest LinkedIn Tumblr


ತಿರುವನಂತಪುರ: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡಿ, ಸುಪ್ರೀಂಕೋರ್ಟ್​ ನೀಡಿರುವ ತೀರ್ಪು ಜಾರಿ ವಿರೋಧಿಸಿ, ಆರು ದಿನಗಳಿಂದ ನಡೆದ ಪ್ರತಿಭಟನೆ ಮೆರವಣಿಯ ಸಮಾರೋಪ ಇಂದು ನಡೆಯಿತು. ಪ್ರತಿಭಟನೆಗೆ ಬಿಜೆಪಿ ಸಾಥ್ ನೀಡಿದ್ದರಿಂದ ಹೋರಾಟ ಕಾವು ಮತ್ತಷ್ಟು ಹೆಚ್ಚಾಗಿದೆ.

ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಇದರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಸುಪ್ರೀಂಕೋರ್ಟ್​ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸದೆ, ತೀರ್ಪು ಜಾರಿಗೆ ಮುಂದಾಗಿರುವ ಕೇರಳ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಬರಮಲೆ ದೇವಸ್ಥಾನದ ಆಚರಣೆಗಳು ಮತ್ತು ಪದ್ಧತಿಗಳನ್ನು ಉಳಿಸಲು ಬದ್ಧ ಎಂದು ಕೇರಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಿ.ಎಸ್. ಶ್ರೀಧರನ್​ ಪಿಳ್ಳೆ ಹೇಳಿದ್ದಾರೆ.

ಮುಂದಿನ 24 ಗಂಟೆಯಲ್ಲಿ ಸರ್ಕಾರ ಈ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ ಬೇರೊಂದು ರೀತಿಯಲ್ಲಿ ಚಳವಳಿ ಮಾಡಬೇಕಾಗುತ್ತದೆ ಎಂದು ಪಿಳ್ಳೆ ಎಚ್ಚರಿಕೆ ನೀಡಿದ್ದಾರೆ. ವಿಚಾರವನ್ನು ಬಳಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಡಳಿತಾರೂಢ ಸಿಪಿಎಂ ಆರೋಪಿಸಿದೆ. ಈ ಆರೋಪಕ್ಕೆ ತಳ್ಳಿ ಹಾಕಿರುವ ಬಿಜೆಪಿ ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಭಕ್ತರ ಹಿತಾದೃಷ್ಟಿಯಿಂದ ಬಿಜೆಪಿ ಈ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಅಲ್ಲದೇ, ಸುಪ್ರೀಂಕೋರ್ಟ್​ ಆದೇಶವನ್ನು ನೆಪವಾಗಿ ಇಟ್ಟುಕೊಂಡು ಶಬರಿಮಲೆ ಮಹತ್ವವನ್ನು ನಾಶ ಮಾಡಲು ಸಿಪಿಎಂ ಯತ್ನಿಸುತ್ತಿದೆ. ಎಂದು ಅವರು ಆರೋಪ ಮಾಡಿದರು.

Comments are closed.