ರಾಷ್ಟ್ರೀಯ

ವಿದ್ಯಾರ್ಥಿಗಳಿಗೆ ಕೈಗಳ ಸ್ವಚ್ಛತೆ ಕುರಿತು ವಿಶೇಷ ಜಾಗೃತಿ: ಗಿನ್ನೆಸ್ ದಾಖಲೆ ಯತ್ನ

Pinterest LinkedIn Tumblr


ಸೇಲಂ: ತಮಿಳುನಾಡಿನ ಸೇಲಂ ಜಿಲ್ಲಾಡಳಿತ ವಿದ್ಯಾರ್ಥಿಗಳಿಗೆ ಕೈಗಳ ಸ್ವಚ್ಛತೆ ಕುರಿತು ವಿಶೇಷ ಜಾಗೃತಿ ಮೂಡಿಸಲು ಮತ್ತು ಗಿನ್ನೆಸ್ ದಾಖಲೆ ಸ್ಥಾಪಿಸಲು ಯತ್ನಿಸಿ ಸುದ್ದಿ ಮಾಡಿದೆ. ಕೈ ತೊಳೆಯುವುದರ ಮಹತ್ವ ಸಾರುವ ಬಗ್ಗೆ ಯುನಿಸೆಫ್, ಸೇಲಂ ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಈ ಜಾಗೃತಿ ಕಾರ್ಯಕ್ರಮ ನಡೆದಿದೆ.

ಸೋನಾ ಕಾಲೇಜ್ ಆಫ್ ಟೆಕ್ನಾಲಜಿ ಆವರಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿವಿಧ ಶಾಲೆ ಮತ್ತು ಕಾಲೇಜುಗಳ 4,200 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಸ್ಥಳದಲ್ಲಿ ನ್ಯಾಯವಾದಿಗಳು, ಲೆಕ್ಕ ಪರಿಶೋಧಕರು ಉಪಸ್ಥಿತರಿದ್ದು, ಅಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳ ಇರುವಿಕೆಯನ್ನು ಸಾಬೀತುಪಡಿಸಿದರು.

ಸೇಲಂ ಜಿಲ್ಲಾಧಿಕಾರಿ ರೋಹಿಣಿ ಆರ್ ಭಾಜಿಭಾಕರೆ ವಾಶ್‌ ಹ್ಯಾಂಡ್‌ ಸೇಲಂ-2018 ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್ಸ್‌ ಮತ್ತು ಯುನಿಸೆಫ್ ಪರವಾಗಿ ಚೆನ್ನೈನ ಕ್ವೆಸ್ಟ್‌ ಸಂಸ್ಥೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದಾಖಲೀಕರಣಗೊಳಿಸಿ ಗಿನ್ನೆಸ್ ರೆಕಾರ್ಡ್‌ ಬುಕ್‌ಗೆ ಕಳುಹಿಸಲಾಗಿದೆ. ಈ ಮೊದಲು ಸೌದಿ ಅರೇಬಿಯಾದಲ್ಲಿ 724 ಮಂದಿ ಭಾಗವಹಿಸಿ ದಾಖಲೆ ನಿರ್ಮಿಸಿದ್ದರು.

ಮೂಲ ವರದಿ: ಸಮಯಂ ತಮಿಳು

Comments are closed.