ರಾಷ್ಟ್ರೀಯ

ತ್ರಿವಳಿ ತಲಾಖ್​ಗೆ ಬೆಂಬಲ ಕೊಟ್ಟವರೇ ಶಬರಿಮಲೆ ಪ್ರವೇಶ ವಿರೋಧ!; ಸುಬ್ರಮಣಿಯನ್​ ಸ್ವಾಮಿ

Pinterest LinkedIn Tumblr


ನವದೆಹಲಿ: ಒಂದು ಕಡೆ ಕೇರಳದಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ತಡೆಗಟ್ಟಲು ಪ್ರಯತ್ನಿಸುತ್ತಿರುವ ಪ್ರತಿಭಟನಾಕಾರರಿಗೆ ಬಿಜೆಪಿ ನೇರವಾಗಿಯೇ ಬೆಂಬಲ ಘೋಷಿಸಿದೆ. ಇನ್ನೊಂದೆಡೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿದರೆ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ಇಬ್ಬಂದಿ ನೀತಿ ಅನುಸರಿಸುತ್ತಿದ್ದಾರಾ? ಎಂಬ ಅನುಮಾನ ಮೂಡುತ್ತಿದೆ.

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂಬ ತೀರ್ಪು ಬರುವ ಮೊದಲು ಇಸ್ಲಾಂ ಧರ್ಮದಲ್ಲಿರುವ ತ್ರಿವಳಿ ತಲಾಖ್​ ನಿಷೇಧ ಎಂಬ ತೀರ್ಪು ಬಂದಿತ್ತು. ಆಗ ದೇಶಕ್ಕೆ ದೇಶವೇ ಆ ತೀರ್ಪಿಗೆ ಚಪ್ಪಾಳೆ ತಟ್ಟಿತ್ತು. ಅದೇ ಜನರು ಇಂದು ಶಬರಿಮಲೆ ತೀರ್ಪಿನ ವಿರುದ್ಧ ಆಕ್ಷೇಪ ಎತ್ತುತ್ತಿರುವುದು ಯಾಕೆ? ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರೂ ಪ್ರವೇಶಿಸಬಹುದು ಎಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್​ ವಿರುದ್ಧ ಘೋಷಣೆ ಕೂಗುತ್ತ ಕೇರಳದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಧ್ವನಿಯೆತ್ತಿರುವ ಸುಬ್ರಮಣಿಯನ್​ ಸ್ವಾಮಿ, ಸುಪ್ರೀಂಕೋರ್ಟ್​ ತೀರ್ಪನ್ನು ಎಲ್ಲರೂ ಗೌರವಿಸಬೇಕು ಎಂದಿದ್ದಾರೆ.

ಶಬರಿಮಲೆ ವಿಷಯದಲ್ಲಿ ಕಾನೂನಿಗಿಂತಲೂ ನಮ್ಮ ಸಂಸ್ಕೃತಿ, ನಡೆದುಕೊಂಡು ಬಂದಿರುವ ಪದ್ಧತಿ ದೊಡ್ಡದು ಎಂದು ಹೇಳಲಾಗುತ್ತಿದೆ. ತ್ರಿವಳಿ ತಲಾಖ್​ ಕೂಡ ಅವರ ಧರ್ಮದ ಸಂಸ್ಕೃತಿಯೇ ಆಗಿತ್ತು. ನಾವು ಮುಂದುವರಿಯುತ್ತಿದ್ದೇವೆ ಎಂದಾಗ ಅದನ್ನು ಸ್ವಾಗತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅದುಬಿಟ್ಟು ಇದುವರೆಗೆ ನಡೆದುಕೊಂಡು ಬಂದಿದ್ದೇ ಮುಂದೂ ನಡೆಯಬೇಕು ಎಂದು ವಾದಿಸುವುದು ಮೂರ್ಖತನ ಎಂದಿದ್ದಾರೆ.

Comments are closed.