ರಾಷ್ಟ್ರೀಯ

ರಾಮಮಂದಿರ ನಿರ್ಮಾಣಕ್ಕೆ ಸರ್ಕಾರವು ಕೂಡಲೇ ಸೂಕ್ತ ಮತ್ತು ಅಗತ್ಯ ಕಾನೂನನ್ನು ಜಾರಿಗೆ ತರಲಿ:: ಮೋಹನ್‌ ಭಾಗವತ್‌

Pinterest LinkedIn Tumblr

ನಾಗ್‌ಪುರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರವು ಕೂಡಲೇ ಸೂಕ್ತ ಮತ್ತು ಅಗತ್ಯ ಕಾನೂನನ್ನು ಜಾರಿಗೆ ತರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ತಿಳಿಸಿದ್ದಾರೆ.

ವಿಜಯದಶಮಿ ಅಂಗವಾಗಿ ನಡೆದ ಆರ್‌ಎಸ್‌ಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯೆ ಪ್ರಕರಣ ಬಾಕಿ ಉಳಿದಿದ್ದು, ಅಕ್ಟೋಬರ್‌ 29ರಂದು ವಿಚಾರಣೆ ಆರಂಭವಾಗಲಿದೆ. ಈ ಬೆನ್ನಲ್ಲೇ ಮೋಹನ್‌ ಭಾಗವತ್‌, ಕೇಂದ್ರ ಸರ್ಕಾರಕ್ಕೆ ಕಾನೂನು ರೂಪಿಸುವಂತೆ ಹೇಳಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಸರ್ಕಾರವು ರಾಮಮಂದಿರ ನಿರ್ಮಾಣಕ್ಕೆ ಇರುವ ಅಡತಡೆಗಳನ್ನು ನಿವಾರಿಸಬೇಕು. ಅದಕ್ಕಾಗಿ ಸೂಕ್ತ ಮತ್ತು ಅಗತ್ಯ ಕಾನೂನುನ್ನು ರೂಪಿಸಬೇಕು. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಕೆಲವು ಯೋಜಿತ ವಿಷಯಗಳು ಮಧ್ಯಸ್ಥಿಕೆ ವಹಿಸುವ ಮೂಲಕ ತೀರ್ಪಿನ್ನು ಸ್ಥಗಿತಗೊಳಿಸಲು ಪ್ರಭಾವ ಬೀರಲಿವೆ. ಯಾವುದೇ ಕಾರಣವಿಲ್ಲದೆಯೇ ಸಮಾಜದ ತಾಳ್ಮೆ ಕೆಡಿಸುವ ಆಸಕ್ತಿ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

ಆತ್ಮಗೌರವದ ದೃಷ್ಟಿಕೋನದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಮತ್ತು ಇದು ಸೌಹಾರ್ದತೆ ಮತ್ತು ಏಕತೆಯ ವಾತಾವರಣಕ್ಕೆ ದಾರಿಮಾಡಿಕೊಡುತ್ತದೆ. ಆಯೋಧ್ಯೆಯಲ್ಲಿ ರಾಮಮಂದಿರವಿತ್ತು ಎನ್ನುವ ಕುರಿತು ಎಲ್ಲ ರೀತಿಯ ಪುರಾವೆಗಳಿದ್ದರೂ ಕೂಡ ಇನ್ನು ದೇವಾಲಯದ ನಿರ್ಮಾಣಕ್ಕೆ ಸ್ಥಳವನ್ನು ನಿಯೋಜಿಸಲಾಗಿಲ್ಲ ಎಂದು ಹೇಳಿದರು.

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿರುವುದು ಸಮಾನತೆ ಹೆಸರಿನಲ್ಲಿ ಅಸಮಾನತೆಯ ಸೃಷ್ಟಿಗೆ ನಾಂದಿ ಹಾಡಿದೆ. ಭಾವನಾತ್ಮಕ ವಿಚಾರಗಳಲ್ಲಿ ಈ ರೀತಿಯ ತೀರ್ಪುಗಳನ್ನು ನೀಡುವುದು ಸರಿಯಲ್ಲ ಎಂದು ಹೇಳಿದರು.

ಒಟ್ಟಾರೆ ರಾಮಮಂದಿರ ನಿರ್ಮಾಣ ವಿಚಾರವನ್ನಿಟ್ಟುಕೊಂಡು ಅಧಿಕಾರಕ್ಕೆ ಬಂದಿದ್ದ ಬಿಜೆಪಿಯು ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಹೇಗೆ ತನ್ನ ದೃಷ್ಟಿಕೋನ ಬದಲಾಯಿಸಲಿದೆ ಎನ್ನುವ ಕುರಿತು ಕುತೂಹಲಕ್ಕೆ ಕಾರಣವಾಗಿದೆ.

Comments are closed.