ಗಜಪತಿ(ಒಡಿಶಾ): ತಿತ್ಲಿ ಚಂಡಮಾರುತದ ಹೊಡೆತಕ್ಕೆ ಆಂಧ್ರ ಪ್ರದೇಶ ಹಾಗೂ ಒಡಿಶಾ ತತ್ತರಿಸಿತ್ತು. ಇದೀಗ ತಿತ್ಲಿ ಅಬ್ಬರ ಕಡಿಮೆಯಾದ ಬೆನ್ನಲ್ಲೇ ಮನಕಲಕುವ ಘಟನೆಯೊಂದು ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿದೆ.
ತಿತ್ಲಿ ಚಂಡಮಾರುತದ ಪರಿಣಾಮ ಸೃಷ್ಟಿಯಾಗಿದ್ದ ಪ್ರವಾಹದಲ್ಲಿ ಅಟಂಕ್ ಪುರ ಗ್ರಾಮದ ಮುಕುಂದ್ ದೋರಾ ಎಂಬುವರ ಎಂಟು ವರ್ಷದ ಮಗಳು ಬಬಿತಾ ಕೊಚ್ಚಿ ಹೋಗಿದ್ದಳು.
ಎಂಟು ದಿನಗಳ ಸತತ ಹುಡುಕಾಟದ ಬಳಿಕ ಬಬಿತಾ ಶವ ಪತ್ತೆಯಾಗಿತ್ತು. ಮಗಳ ಕೊಳೆತ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಂದೆ ಮುಕುಂದ್ ಎಂಟು ಕಿ.ಮೀ ದೂರದವರೆಗೆ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದು ಈ ದೃಶ್ಯ ಅಲ್ಲಿನ ಗ್ರಾಮಸ್ಥರನ್ನು ಮೂಕರನ್ನಾಗಿಸಿತ್ತು.
ರಾಷ್ಟ್ರೀಯ
Comments are closed.