ರಾಷ್ಟ್ರೀಯ

ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದ ತಮಿಳುನಾಡಿನ 9 ವರ್ಷದ ಹುಡುಗಿ

Pinterest LinkedIn Tumblr


ಶಬರಿಮಲೆ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ನಿಯಮದ ಪ್ರಕಾರ 10 ವರ್ಷದೊಳಗಿನ ಮತ್ತು 50 ವರ್ಷದ ಮೇಲಿನ ಮಹಿಳೆಯರಿಗೆ ಮಾತ್ರ ದೇಗುಲದೊಳಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ. ಅದರಂತೆ ಇಂದು ದೇವರ ದರ್ಶನ ಪಡೆದ ತಮಿಳುನಾಡಿನ ಮಧುರೈ ಮೂಲದ 9 ವರ್ಷದ ಹುಡುಗಿ ‘ ನನಗೆ 50 ವರ್ಷವಾದ ಬಳಿಕ ಮತ್ತೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಬರುತ್ತೇನೆ’ ಎಂದು ಬೋರ್ಡ್​ ತೂಗುಹಾಕಿಕೊಂಡು ದೇಗುಲದ ಆವರಣದೊಳಗೆ ಓಡಾಡುತ್ತಿದ್ದಳು.

ಆಕೆಯ ಅಪ್ಪ-ಅಮ್ಮ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಾವೇನೂ ಹೇಳುವುದಿಲ್ಲ. ಆದರೆ, ನನ್ನ ಮಗಳಿಗೆ 10 ವರ್ಷ ತುಂಬಿದ ನಂತರ ಆಕೆಯನ್ನು ದೇವಸ್ಥಾನಕ್ಕೆ ಬರಲು ಬಿಡುವುದಿಲ್ಲ. ದೇವಸ್ಥಾನದ ನಿಯಮದಂತೆ ಅವಳಿಗೆ 50 ವರ್ಷವಾದ ನಂತರವೇ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುತ್ತಾಳೆ ಹೇಳಿದ್ದಾರೆ.

ಸುಪ್ರೀಂಕೋರ್ಟ್​ ತೀರ್ಪಿನ ಅನ್ವಯ ನಾವೂ ದೇವಸ್ಥಾನದೊಳಗೆ ಪ್ರವೇಶಿಸುತ್ತೇವೆ ಎಂದು ಶಬರಿಮಲೆಯತ್ತ ಹಠ ಹಿಡಿದು ಬರುತ್ತಿರುವವರು ಕೆಲವರಾದರೆ, ನಾವು ಹಳೆಯ ಪದ್ಧತಿಯನ್ನೇ ಪಾಲಿಸುತ್ತೇವೆ ಎಂದು ಸಂಪ್ರದಾಯವನ್ನು ಪಾಲಿಸಿಕೊಂಡು ಹೋಗುತ್ತಿರುವವರು ಕೆಲವರು. ಈ ಕಾರಣದಿಂದಲೇ ಸದ್ಯಕ್ಕೆ ಶಬರಿಮಲೆ ವಿವಾದದ ಕೇಂದ್ರಬಿಂದುವಾಗಿದೆ. ಕಾನೂನು ಮತ್ತು ಧಾರ್ಮಿಕ ನಂಬಿಕೆ ಎರಡರಲ್ಲಿ ಯಾವುದು ಗೆಲ್ಲುತ್ತದೆ ಎಂಬುದು ಮಾತ್ರ ಸ್ಪಷ್ಟವಾಗುತ್ತಿಲ್ಲ.

Comments are closed.