ರಾಷ್ಟ್ರೀಯ

ವರದಕ್ಷಿಣೆಗಾಗಿ ಬೈಕ್, ಚಿನ್ನದ ಬೇಡಿಕೆ: ವರನಿಗೆ ವಧುವಿನ ಕಡೆಯವರು ಮಾಡಿದ್ದೇನು ಗೊತ್ತಾ?

Pinterest LinkedIn Tumblr


ಲಕ್ನೋ: ಭಾರತ ಸರಕಾರ ಮತ್ತು ಸುಪ್ರೀಂ ಕೋರ್ಟ್ ವರದಕ್ಷಿಣೆ ತೆಗೆದುಕೊಳ್ಳುವುದು/ನೀಡುವುದು ಅಪರಾಧ ಎಂದು ಮಾರ್ಗದರ್ಶನಗಳನ್ನು ನೀಡಿದ ನಂತರವೂ ದೇಶದಲ್ಲಿ ವರದಕ್ಷಿಣೆ ಎಂಬ ಪಿಡುಗು ಅಂತ್ಯ ಕಂಡಿಲ್ಲ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ವರದಕ್ಷಿಣೆ ನೀಡಿಲ್ಲ ಎಂಬ ಕಾರಣಕ್ಕೆ ಮದುವೆ ನಿಲ್ಲಿಸಿದ ವರನಿಗೆ ವಧುವಿನ ಕಡೆಯವರು ತಕ್ಕ ಪಾಠ ಕಲಿಸಿದ್ದಾರೆ.

ವರದಕ್ಷಿಣೆಗಾಗಿ ಬೈಕ್ ಹಾಗೂ ಚಿನ್ನದ ಬೇಡಿಕೆ:
ವಾಸ್ತವವಾಗಿ, ಸೋಮವಾರ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಇಂದಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲ್ಯಾಣ ಮಂಟಪವೊಂದರಲ್ಲಿ ವಿವಾಹ ನಡೆಯುತ್ತಿತ್ತು. ವಿವಾಹದ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಬೈಕ್ ಹಾಗೂ ಬಂಗಾರ ನೀಡಬೇಕೆಂದು ವರನ ಕಡೆಯವರು ಪೀದಿಸಿದ್ದಾರೆ. ಇದಲ್ಲದೆ, ಅವರ ಬೇಡಿಕೆಯನ್ನು ಪೂರೈಸದಿದ್ದರೆ ಅವರು ಮದುವೆಯನ್ನು ನಿಲ್ಲಿಸುವುದಾಗಿ ವರನ ಕಡೆಯವರು ವಧುವಿನ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ.

ವರನ ಕಡೆಯವರ ಬೆದರಿಕೆಯಿಂದ ಆಕ್ರೋಶಗೊಂಡ ವಧುವಿನ ಕುಟುಂಬಸ್ಥರು ವರನನ್ನು ಕಟ್ಟಿ ಹಾಕಿ ತಲೆ ಬೋಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿರುವ ವರ, ಮದುವೆ ಮಂಟಪದಲ್ಲಿ ಯಾವುದೇ ರೀತಿಯ ಹೊಸ ಬೇಡಿಕೆಯನ್ನು ಇಟ್ಟಿಲ್ಲ. ಮದುವೆಯನ್ನು ನಿರ್ಧರಿಸುವಾಗಲೇ ಆತನ ಕುಟುಂಬವು ಬೈಕ್ ಹಾಗೂ ಬಂಗಾರ ನೀಡಬೇಕೆಂಬ ಮಾತುಕತೆ ನಡೆದಿತ್ತು ಎಂದಿದ್ದಾರೆ.

Comments are closed.