ರಾಷ್ಟ್ರೀಯ

ಸ್ಮಾರ್ಟ್​ಫೋನ್ ಬಳಕೆದಾರರಿಗೆ ಕಹಿ ಸುದ್ದಿ

Pinterest LinkedIn Tumblr


ಭಾರತದಲ್ಲಿ ಅಗ್ಗದ ದರದ ಡಾಟಾ ಪೂರೈಸುತ್ತಿರುವ ರಿಲಯನ್ಸ್‌ ಜಿಯೊ ಅಶ್ಲೀಲ ವಿಡಿಯೋ ವೆಬ್​ಸೈಟ್​ಗಳ ನಿಷೇಧ ಹೇರಿದೆ. ಈ ಹಿನ್ನಲೆಯಲ್ಲಿ ವಿಶ್ವ ಪ್ರಸಿದ್ಧ ಪೋರ್ನ್​ ಸೈಟ್​ಗಳಾದ ಪೋರ್ನ್​ಹಬ್,ಎಕ್ಸ್​ಎನ್​ಎಕ್ಸ್​ಎಕ್ಸ್​, ಎಕ್ಸ್​ ವಿಡಿಯೋಸ್ ವಿಡಿಯೋಗಳನ್ನು ನೋಡಲು ಜಿಯೊ ಗ್ರಾಹಕರಿಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಇತ್ತೀಚೆಗೆ ಉತ್ತರಾಖಂಡ್‌ ಹೈಕೋರ್ಟ್ ಕಾಮಪ್ರಚೋದಕ ವೆಬ್​ಸೈಟ್​ನ್ನು ನಿಷೇಧಿಸಬೇಕೆಂದು​ ಟೆಲಿಕಾಂ ಕಂಪನಿಗಳಿಗೆ ಸೂಚನೆ ಹೊರಡಿಸಿತ್ತು. ಇದರಲ್ಲಿ 827 ಪೋರ್ನ್​ ವೆಬ್​ಸೈಟ್​ಗಳ ಮೇಲೆ ನಿಷೇಧ ಹೇರಲು ತಿಳಿಸಲಾಗಿದೆ. 2015 ರಲ್ಲಿ ಕೇಂದ್ರ ಸರ್ಕಾರ ನೂರಾರು ಅಶ್ಲೀಲ ವಿಡಿಯೋ ಸೈಟ್​ಗಳನ್ನು ನಿಷೇಧಿಸಲು ಮುಂದಾಗಿತ್ತು.​ ಆದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ನಿಷೇಧವನ್ನು ಕೈಬಿಟ್ಟಿದ್ದರು.

ಈಗಾಗಲೇ ಪೋರ್ನ್​ ನಿಷೇಧದ ಕುರಿತು ರೆಡ್ಡಿಟ್​ ಜಾಲತಾಣಿಗರು ಜಿಯೋ ನೆಟ್​ವರ್ಕ್​​ನಲ್ಲಿ ಪೋರ್ನ್​ ವೆಬ್​ಸೈಟ್​​ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಅಲ್ಲದೆ ಈ ತೀರ್ಪಿನ ಕುರಿತು ಹಲವಾರು ಟ್ರೋಲ್​ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೇಂದ್ರ ಸರ್ಕಾರದ ಆದೇಶದ ಅನ್ವಯ ಎಲ್ಲ ಇಂಟರ್​ನೆಟ್​ ಸೇವಾ ಲೈಸೆನ್ಸ್​ ಹೊಂದಿರುವವರು ಅಶ್ಲೀಲ ಚಿತ್ರ ಮತ್ತು ವಿಡಿಯೋಗಳಿರುವ 827 ಪೋರ್ನ್​ ವೆಬ್​ಸೈಟ್​ಗಳನ್ನು ಬ್ಲಾಕ್ ಮಾಡಬೇಕೆಂದು ದೂರಸಂಪರ್ಕ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಹೀಗಾಗಿ ಜಿಯೊ ತನ್ನ ನೆಟ್​ವರ್ಕ್​​ನಲ್ಲಿ ಪೋರ್ನ್​ ವೆಬ್​ಸೈಟ್​ ಒಪನ್​ ಆಗುತ್ತಿಲ್ಲ ಎನ್ನಲಾಗಿದೆ. ಅಲ್ಲದೆ ಶೀಘ್ರದಲ್ಲೇ ಇನ್ನುಳಿದ ಕಂಪನಿಗಳೂ ಕೂಡ ಪೋರ್ನ್ ಸೈಟ್​ಗಳ ಮೇಲೆ ನಿಷೇಧ ಹೇರಲಿದೆ ಎಂದು ಹೇಳಲಾಗುತ್ತಿದೆ.

ವಿಶ್ವದಲ್ಲಿ ಅತಿ ಹೆಚ್ಚು ಪೋರ್ನ್ ವಿಡಿಯೋ ವೀಕ್ಷಿಸುವ ದೇಶಗಳ ಪಟ್ಟಿಯಲ್ಲಿ (2015) ಭಾರತವು 3 ನೇ ಸ್ಥಾನದಲ್ಲಿದ್ದು, ಈ ನಿಷೇಧದಿಂದ ಪೋರ್ನ್​ ಮಾರುಕಟ್ಟೆಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.

Comments are closed.