ನವದೆಹಲಿ: ಜಾನ್ಸಿಯಲ್ಲಿ ಪೋಲಿಸ್ ಕಾನ್ಸ್ಟೇಬಲ್ ಆಗಿರುವ ಅರ್ಚನಾ ಜಯಂತ್ ಯಾದವ್ ತನ್ನ ಕರ್ತ್ಯವ್ಯದ ಜೊತೆಗೆ ಆರು ತಿಂಗಳ ಹಸುಗೂಸನ್ನು ಆರೈಕೆ ಮಾಡುತ್ತಿರುವ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗ ಈಕೆ ಕರ್ತ್ಯವ್ಯ ನಿಷ್ಠೆಗೆ ಎಲ್ಲರೂ ಸೆಲ್ಯೂಟ್ ಹೇಳಿದ್ದಾರೆ.ಅಲ್ಲದೆ ಪೋಲಿಸ್ ಠಾಣೆಯಲ್ಲಿ ಮಹಿಳಾ ಪೋಲಿಸ್ ಕಾನ್ಸ್ಟೆಬಲ್ ಗಳಿಗೆ ಉತ್ತಮ ಸೌಲಭ್ಯ ನೀಡಬೇಕೆಂದು ಟ್ವಿಟ್ಟರ್ ನಲ್ಲಿ ಬಹುತೇಕರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಹಿರಿಯ ಪೋಲಿಸ್ ಅಧಿಕಾರಿ ರಾಹುಲ್ ಶ್ರೀವಾಸ್ತವ್ ಈಗ ಈ ಪೋಟೋವನ್ನು ತಮ್ಮ ಟ್ವೀಟರ ನಲ್ಲಿ ಹಂಚಿಕೊಂಡು ಈ ಮಹಿಳೆ ತನ್ನ ಕರ್ತ್ಯವ್ಯದ ಜೊತೆಗೆ ಮಗುವನ್ನು ನೋಡಿಕೊಳ್ಳುವುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಮಹಿಳಾ ಪೋಲಿಸ್ ಆ ಮಗು ಆರು ತಿಂಗಳದ ಅರ್ಚನಾ ಎನ್ನುವ ಮಗು ಡೆಸ್ಕ್ ಬಳಿ ನಿದ್ದೆ ಹೋಗಿದೆ. ಇನ್ನೊಂದೆಡೆ ತಾಯಿ ತನ್ನ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.ಸ್ಥಳೀಯ ಮಾಧ್ಯಮಗಳಲ್ಲಿ ವರದಿ ಮಾಡಿರುವಂತೆ ಆಕೆ ಕರ್ತ್ಯವ್ಯವನ್ನು ಮೆಚ್ಚಿ ಆಕೆಗೆ ಹಿರಿಯ ಅಧಿಕಾರಿಗಳು 1000 ರೂ ಬಹುಮಾನವಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
Comments are closed.