ಲಕ್ನೋ: ಉತ್ತರ ಪ್ರದೇಶವೊಂದರಲ್ಲಿ ಅಪರೂಪದ ಸಂಗತಿಯೊಂದರಲ್ಲಿ ಮಗ ಎಸ್ಪಿ, ತಂದೆ ಪೋಲಿಸ್ ಪೇದೆಯಾಗಿ ಒಂದೇ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಮೊದಲು ಉನ್ನಾವೋದಲ್ಲಿ ಕಾರ್ಯನಿರ್ವಹಿಸುತಿದ್ದ ಅನೂಪ್ ಸಿಂಗ್ ಈಗ ಲಕ್ನೋಗೆ ಪೊಲೀಸ್ ಅಧೀಕ್ಷಕರಾಗಿ (ಉತ್ತರ) ವರ್ಗಾವಣೆಗೊಂಡಿರುವ ಹಿನ್ನಲೆಯಲ್ಲಿ ಆ ಮೂಲಕ ಲಕ್ನೋದಲ್ಲಿ ಪೋಲಿಸ್ ಪೇದೆಯಾಗಿ ಕೆಲಸ ನಿರ್ವಹಿಸುತ್ತಿರುವ ತಂದೆಗೆ ಮಗನೆ ಬಾಸ್ ಆಗಿದ್ದಾರೆ.
ಈಗ ಮಗನ ಸಾಧನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಪೇದೆ ಜನಾರ್ಧನ್ ಸಿಂಗ್ “ನನಗೆ ನನ್ನ ಮಗ ಹಿರಿಯ ಅಧಿಕಾರಿ ಎನ್ನುವುದಕ್ಕೆ ತುಂಬಾ ಹೆಮ್ಮೆಯಾಗುತ್ತದೆ. ಇದು ನಿಜಕ್ಕೂ ನನಗೆ ಸಿಕ್ಕ ಗೌರವ, ಅವನ ಕೆಳಗೆ ಕೆಲಸ ಮಾಡಲು ಸಂತಸವಾಗುತ್ತದೆ” ಎಂದು ತಿಳಿಸಿದರು.
ಅಲ್ಲದೇ ಕರ್ತವ್ಯದಲ್ಲಿದ್ದಾಗ ಪ್ರೋಟೋಕಾಲ್ ನಿಯಮದನ್ವಯ ತಮ್ಮ ಮಗ ಎಲ್ಲೇ ಭೇಟಿಯಾದಾಗ ಅವರಿಗೆ ಸೆಲ್ಯೂಟ್ ಹೊಡೆಯುತ್ತಾರೆ ಎಂದು ಜನಾರ್ಧನ್ ಸಿಂಗ್ ತಿಳಿಸಿದರು.ಅಲ್ಲದೆ ತಮಗಿಂತ ಅನೂಪ್ ತುಂಬಾ ಟಫ್ ಅಧಿಕಾರಿ ಎಂದು ತಿಳಿಸಿದರು.
ಇನ್ನೊಂದೆಡೆ ಇದಕ್ಕೆ ಪ್ರತಿಕ್ರಿಯಿಸಿರುವ ಎಸ್ಪಿ ಅನೂಪ್ ಸಿಂಗ್ “ಪ್ರತಿಯೊಬ್ಬರೂ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಹೊಂದಿದ್ದಾರೆ, ನಮ್ಮ ಪೋಸ್ಟ್ಗಳ ನಿರೀಕ್ಷೆಯಂತೆ ನಾವು ಕಾರ್ಯನಿರ್ವಹಿಸುತ್ತೇವೆ” ಎಂದು ಅವರು ಹೇಳಿದರು.
Comments are closed.