ರಾಷ್ಟ್ರೀಯ

ಕಾರೊಂದು 50 ಅಡಿ ಆಳಕ್ಕೆ ಬಿದ್ದು ಆರು ದಿನದ ಬಳಿಕ ಬದುಕಿ ಬಂದ ಮಹಿಳೆ !

Pinterest LinkedIn Tumblr

ನವೆದಹಲಿ: ಕಾರು ಅಪಘಾತವಾದ ಆರು ದಿನಗಳ ಬಳಿಕ ಗಂಭೀರವಾಗಿ ಗಾಯಗೊಂಡು ಹುಲ್ಲಿನ ನಡುವೆ ಸಿಲುಕಿಕೊಂಡಿದ್ದ ಮಹಿಳೆಯೊಬ್ಬಳು ಅರಿಝೋನಾ ಮರುಭೂಮಿಯಲ್ಲಿ ಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಹಿಳೆಯ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಇದೇ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಕಾರು ವಾಯುವ್ಯ ಫಿಯೋನಿಕ್ಸ್​ ರಸ್ತೆಯ ವಿಕನ್​ಬರ್ಗ್​ ಪಟ್ಟಣದ ಬಳಿ ಅಪಘಾತಕ್ಕೀಡಾಗಿತ್ತು.

ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯಿದ್ದ ಬೇಲಿಯನ್ನು ಮುರಿದುಕೊಂಡು ಹೋಗಿ 50 ಅಡಿ ಆಳದ ಕೆಳಗೆ ಬಿದ್ದು, ಮರವೊಂದರಲ್ಲಿ ಸಿಲುಕಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಹಲವು ದಿನಗಳವರೆಗೆ ಅಲ್ಲಿಯೇ ಉಳಿಯಬೇಕಾಯಿತು. ಸಹಾಯಕ್ಕಾಗಿ ಬಳಿಯಲ್ಲೇ ಇದ್ದ ರೈಲ್ವೆ ಟ್ರ್ಯಾಕ್​ ಹತ್ತಿರ ಬರಲು ಯತ್ನಿಸಿದಾದರೂ ಆಕೆ ಟ್ರ್ಯಾಕ್​ ತಲುಪಲು ಸಾಧ್ಯವಾಗಿರಲಿಲ್ಲ.

ಒಂದು ದಿನ ರಾಜ್ಯ ಸಾರಿಗೆ ಕೆಲಸಗಾರರು ಹಾಗೂ ರಸ್ತೆ ಬದಿ ಹಸು ಮೇಯಿಸುತ್ತಿದ್ದವನಿಗೆ ಮರದಲ್ಲಿ ಕಾರು ಸಿಲುಕಿಕೊಂಡಿರುವುದು ಕಂಡಿದೆ. ತಕ್ಷಣ ಅವರು ರಾಜ್ಯದ ಸಾರ್ವಜನಿಕ ಸುರಕ್ಷತೆ ಇಲಾಖೆಗೆ ಕರೆ ಮಾಡಿ ತಿಳಿಸಿದಾಗ ಅವರು ಬಂದು ನೋಡಲು ಕಾರಲ್ಲಿ ಯಾರು ಇರಲಿಲ್ಲ. ನಂತರ ಬಳಿಯಲ್ಲೇ ಇದ್ದ ಹೆಜ್ಜೆಯ ಗುರುತನ್ನು ಹಿಂಬಾಲಿಸಿದಾಗ ನಡುವೆ ಮಹಿಳೆಯೊಬ್ಬಳು ಗಂಭೀರವಾದ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ

Comments are closed.