ರಾಷ್ಟ್ರೀಯ

ರಾಹುಲ್ ಗಾಂಧಿ ಪ್ರಧಾನಿಯಾಗುವ ಸಾಧ್ಯತೆ ಇಲ್ಲ: ಶಶಿ ತರೂರ್

Pinterest LinkedIn Tumblr


ಹೊಸದಿಲ್ಲಿ: ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆ ಇಲ್ಲ’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಬಹಿರಂಗವಾಗಿ ಹೇಳಿದ್ದಾರೆ.

‘ನಾವು ಬಿಜೆಪಿಯವರಂತೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಪ್ರಧಾನಿ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್ ಮೈತ್ರಿಕೂಟದ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದರು.

‘ನಮ್ಮಲ್ಲಿ ಪ್ರಣಬ್ ಮುಖರ್ಜಿ ಹಾಗೂ ಪಿ. ಚಿದಂಬರಂ ಅವರಂಥ ಘಟಾನುಘಟಿ ನಾಯಕರಿದ್ದರು. ಅಂತಹ ಹಲವು ಸಮರ್ಥ ನಾಯಕರು ಈಗಲೂ ಇದ್ದಾರೆ. ಕಾಂಗ್ರೆಸ್‌ ಪಕ್ಷ ಮೈತ್ರಿಕೂಟದೊಂದಿಗೆ ಚುನಾವಣೆ ಎದುರಿಸುತ್ತಿರುವುದರಿಂದ ಸರ್ವಸಮ್ಮತ ಅಭ್ಯರ್ಥಿಯನ್ನು ನಂತರ ನಿರ್ಧರಿಸಲಾಗುವುದು. ಆದರೆ, ಕಾಂಗ್ರೆಸ್ ಕಾರ್ಯಕರ್ತರ ಮಟ್ಟಿಗೆ ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿ’ ಎಂದು ತರೂರ್ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ಪಪ್ಪು’ ಎಂದು ಉಲ್ಲೇಖಿಸುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ತರೂರ್, ರಾಷ್ಟ್ರೀಯ ನಾಯಕರೊಬ್ಬರನ್ನು ಈ ರೀತಿ ಅವಮಾನಿಸುವುದು ತರವಲ್ಲ ಎಂದಿದ್ದಾರೆ.

ಮೊನ್ನೆಯಷ್ಟೇ, ನರೇಂದ್ರ ಮೋದಿ ಶಿವಲಿಂಗದ ಮೇಲಿನ ಚೇಳಿನಂತೆ ಎಂದು ಹೇಳುವ ಮೂಲಕ ವಿವಾದಕ್ಕೀಡಾದ ಕಾಂಗ್ರೆಸ್ ಸಂಸದ ಶಶಿ ತರೂರ್, ಈಗ ಪ್ರಧಾನಿ ಅವರು ”ಬಿಳಿ ಕುದುರೆ ಮೇಲೆ ಕುಳಿತುಕೊಂಡು ಖಡ್ಗ ಮೇಲೆತ್ತಿ ಹಿಡಿದಿರುವ ಹೀರೋ’ ಎಂದು ಕುಟುಕಿದ್ದಾರೆ.

Comments are closed.