ಪಣಜಿ: ತಮ್ಮ ವಿರುದ್ಧ ಪ್ರಚಾರಕ್ಕೆ ಮುಂದಾದರೇ ಸಾಮೂಹಿಕ ಅತ್ಯಚಾರ ಮಾಡುವುದಾಗಿ ಕಾಂಗ್ರೆಸ್ ಕಾರ್ಯಕರ್ತೆಗೆ ಬಿಜೆಪಿ ನಾಯಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ತಮಗೆ ಅತ್ಯಚಾರದ ಬೆದರಿಕೆ ಒಡ್ಡಿದ್ದಾರೆಂದು ಬಿಜೆಪಿ ನಾಯಕ ಸುಭಾಶ್ ಶಿರೋಡ್ಕರ್ ಮೇಲೆ ಗೋವಾದ ಕಾಂಗ್ರೆಸ್ ಕಾರ್ಯಕರ್ತೆ ದಿಯಾ ಶೆಟ್ಕರ್ ಗಂಭೀರ ಆರೋಪ ಎಸಗಿದ್ದಾರೆ.
ನಾವು ಮುಂದಿನ ಲೋಕಸಭಾ ಚುನಾವಣೆಗಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇವೆ. ಇದರಿಂದ ಭಯಭೀತರಾದ ಬಿಜೆಪಿ ನಾಯಕ ಸುಭಾಶ್ ಶಿರೋಡ್ಕರ್ ಅವರು ತಮ್ಮ ಬೆಂಬಲಿಗರಿಂದ ಅತ್ಯಾಚಾರದ ಬೆದರಿಕೆ ಹಾಕಿಸಿದ್ಧಾರೆ. ತಮ್ಮ ಬೆಂಬಲಿಗರು ಭಾನುವಾರದಂದು ಕರೆ ಮಾಡಿ ಫೋನಿನಲ್ಲೇ ಅತ್ಯಚಾರ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತೆ ದಿಯಾ ಶೆಟ್ಟರ್ ಪೊಲೀಸರಿಗೆ ದೂರು ದಾಖಲಿಸಿದ್ಧಾರೆ.
ನನಗೆ ಅಪರಿಚಿತ ವ್ಯಕ್ತಿಯೋರ್ವನಿಂದ ಕರೆ ಬಂದಿತ್ತು. ಈ ವೇಳೆ ಸುಭಾಶ್ ಶಿರೋಡ್ಕರ್ ಬೆಂಬಲಿಗ ಎಂದು ಹೇಳಿಕೊಂಡಿದ್ದ ಈತ ಸಾಮೂಹಿಕ ಅತ್ಯಚಾರ ಎಸಗಿವುದಾಗಿ ಧಮ್ಕಿ ಹಾಕಿದ್ದಾರೆ. ಅಲ್ಲದೇ ಕೀಳು ಮಟ್ಟದ ಭಾಷೆಯಲ್ಲಿ ನನ್ನ ತೇಜೋವಧೆ ಮಾಡಿದ್ಧಾರೆ. ಕಾಂಗ್ರೆಸ್ ಬಗ್ಗೆ ಸುಭಾಶ್ ಶಿರೋಡ್ಕರ್ ಅವರ ಕ್ಷೇತ್ರದಲ್ಲಿ ಪ್ರಚಾರ ಮಾಡಬಾರದು. ಹಾಗೇನಾದರೂ ಮಾಡಿದರೆ ಕೊಲ್ಲಿಸಲೂ ಹೆದರುವುದಿಲ್ಲ ಎಂದು ಹೆದರಿಸಿದ್ಧಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಾನು ಕಾಂಗ್ರೆಸ್ ಕಾರ್ಯಕರ್ತೆ ಎನ್ನುವುದ ಬೇರೆ ವಿಷಯ, ಆದರೆ ಬಿಜೆಪಿಯವರಿಗೆ ನಾನು ಒಂದು ಹೆಣ್ಣೆಂಬ ಗೌರವವಿಲ್ಲ. ಓರ್ವ ಮಹಿಳೆಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಸುಭಾಶ್ ಶಿರೋಡ್ಕರ್ & ಬೆಂಬಲಿಗರು ಇಷ್ಟು ಕೀಳು ಮಟ್ಟದ ಹಂತಕ್ಕೆ ಇಳಿದಿದ್ದಾರೆ. ನಾಳೆ ಏನಾದರೂ ನನಗೆ ಅನಾಹುತವಾದರೇ, ಇದಕ್ಕೆ ಈ ಅಪರಿಚಿತ ವ್ಯಕ್ತಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಗೋವಾದ ಶಿರೋಡಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸುಭಾಶ್ ಶಿರೋಡ್ಕರ್ ಈ ಹಿಂದೆ ಕಾಂಗ್ರೆಸ್ನಲ್ಲಿದ್ದರು ಎನ್ನಲಾಗಿದೆ. ಕಳೆದ ಅಕ್ಟೋಬರ್ನಲ್ಲಿ ಕಾಂಗ್ರೆಸ್ ತೊರೆದ ಶಿರೋಡ್ಕರ್ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ. ಇದೀಗ ದಿಯಾ ಶೆಟ್ಕರ್ ಶಿರೋಡ್ಕರ್ ಮೇಲೆ ಸಾಮೂಹಿಕ ಅತ್ಯಾಚಾರ ಬೆದರಿಕೆಯ ಆರೋಪ ಮಾಡಿದ್ದಾರೆ. ಅಲ್ಲದೇ ಈ ಆರೋಪಗಳಿಗೆ ಸುಭಾಶ್ ಶಿರೋಡ್ಕರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ಗೆ ಮುಖಭಂಗ: ಗೋವಾದಲ್ಲಿ ಕಾಂಗ್ರೆಸ್ ಅವನತಿಯ ಹಾದಿ ಹಿಡಿದಿದೆ ಎನ್ನಲಾಗಿತ್ತು. ಹೀಗಾಗಿ ಶಿರೋಡ್ಕರ್ ಸೇರಿದಂತೆ ಕಾಂಗ್ರೆಸ್ಸಿನ ಶಾಸಕರಿಬ್ಬರು ಬಿಜೆಪಿ ಸೇರಿದ್ದರು. ಈಗ ಮತ್ತೊಮ್ಮೆ ಮೂವರು ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸುದ್ದಿ ಹರಿದಾಡುತ್ತಿದೆ. ಇನ್ನೊಂದೆಡೆ ಸಿಎಂ ಮನೋಹರ್ ಪರಿಕ್ಕರ್ ನೇತೃತ್ವದ ಸರ್ಕಾರದ ಆಡಳಿತ ಯಂತ್ರ ಕುಸಿದಿದೆ ಎಂದು ಆರೋಪಿಸಿ ಸರ್ಕಾರ ರಚನೆಗೆ ಯತ್ನಿಸಿದ ಕಾಂಗ್ರೆಸ್ಗೆ ಆರಂಭದಲ್ಲೇ ಭಾರೀ ಮುಖಭಂಗವಾಗಿದೆ.
Comments are closed.