ಸೂರತ್: ಚಿತ್ರರಂಗದಲ್ಲಿ ಸದ್ದು ಮಾಡಿದ ‘ಮಿಟೂ’ ಆರೋಪಗಳು ನಂತರ ರಾಜಕೀಯ, ಕ್ರೀಡೆ ಸೇರಿದಂತೆ ಅನೇಕ ರಂಗಗಳಲ್ಲಿಯೂ ಕೇಳಿ ಬಂದಿತು. ಈಗ ಪೊಲೀಸ್ ಇಲಾಖೆಯಲ್ಲಿಯೂ ಸದ್ದು ಮಾಡಿದ್ದು, ಇಬ್ಬರು ಉನ್ನತಾಧಿಕಾರಿಗಳು ಕೆಲಸದಿಂದ ಅಮಾನತು ಕೊಂಡಿದ್ದಾರೆ.
ಗೃಹ ರಕ್ಷಣಾ ದಳದ ಇಬ್ಬರು ಅಧಿಕಾರಿಗಳ ಮೇಲೆ 25 ಮಹಿಳಾ ಹೋಂ ಗಾರ್ಡ್ಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಮೇಲಾಧಿಕಾರಿಗಳು ಕೆಲಸ ಸಮಯದಲ್ಲಿ ನಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಇಲಾಖೆಗೆ ದೂರು ದಾಖಲಿಸಿದ್ದಾರೆ.
ಈ ಆರೋಪದ ಮೇಲೆ ಸೂರತ್ನ ಇಬ್ಬರು ಗೃಹ ರಕ್ಷಣಾ ದಳದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಳೆದವಾರ ಮಹಿಳೆಯರು ಪೊಲೀಸ್ ಕಮಿಷನರ್ ಸತೀಶ್ ಶರ್ಮಾಗೆ ಲಿಖಿತ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.
‘ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಅನೇಕ ಮಹಿಳಾ ಹೋಂ ಗಾರ್ಡ್ಗಳು ಲಿಖಿತ ದೂರು ನೀಡಿದ್ದಾರೆ. ಈ ಆಧಾರದ ಮೇಲೆ ಅವರನ್ನು ಅಮಾನತು ಮಾಡಲಾಗಿದ್ದು, ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಡೆಪ್ಯೂಟಿ ಸೂಪರಿಟೆಂಡ್ ಪೊಲೀಸ್ ಅಧಿಕಾರಿ ತನಿಖೆ ನಡೆಸಲಾಗುವುದು’ ಎಂದು ಹೋಂ ಗಾರ್ಡ್ನ ಕಮಾಂಡೆಟ್ ಜೆನರಲ್ ಪಿಬಿ ಗೊಂಡಿಯಾ ತಿಳಿಸಿದ್ದಾರೆ.
ಈಗಾಗಲೇ 19ರಿಂದ 25 ದೂರುಗಳನ್ನು ಆಡಿಯೋ ಮೂಲಕ ದಾಖಲಿಸಲಾಗಿದೆ. ಇಬ್ಬರು ಅಧಿಕಾರಿಗಳು ಮಾನಸಿ, ದೈಹಿಕ, ಲೈಂಗಿಕ, ಭಾವನಾತ್ಮಕ ಮತ್ತು ಆರ್ಥಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
Comments are closed.