ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೈಬರ್ ಕ್ರೈಮ್ ಹೆಚ್ಚುತ್ತಿದೆ. ಇದರಿಂದ ಫೇಸ್ಬುಕ್ ಖಾತೆ ಹ್ಯಾಕ್ ಆಗಲಿದೆ, ಹೀಗಾಗಿ ಎಚ್ಚರವಹಸಿಬೇಕೆಂದು ಹೇಳಲಾಗುತ್ತಿತ್ತು. ಪ್ರಮುಖವಾಗಿ ಹ್ಯಾಕಿಂಗ್ ವೇಳೆ ನಮ್ಮ ಡೇಟಾ, ಖಾಸಗಿ ಮೆಸೇಜುಗಳು ಎಲ್ಲವೂ ಕಳವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಫೇಸ್ಬುಕ್ ಬಳಕೆದಾರರಿಗೆ ಮತ್ತೊಂದು ಆಂತಕಕಾರಿ ಸುದ್ದಿಯೊಂದು ಕಾದಿದೆ. ಹಣಕ್ಕಾಗಿ ಫೇಸ್ಬುಕ್ ಸಂಸ್ಥೆಯೇ ಬಳಕೆದಾರರ ಡೇಟಾ ಮಾರಟ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಖಾಸಗಿ ಮೆಸೇಜ್ಕಳಿಸುವ ಮುನ್ನ ನಾವು ಎಚ್ಚರಿಕೆಯಿಂದ ಇರಬೇಕಿದೆ.
ನ್ಯೂಯಾರ್ಕ್ ಮೂಲದ ಪತ್ರಿಕೆಯೊಂದು ಫೇಸ್ಬುಕ್ ಬಳಕೆದಾರರ ಡೇಟಾ, ಖಾಸಗಿ ಸಂದೇಶಗಳು, ಸಂಪರ್ಕ ಸಮೇತ ಕೆಲವು ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಪ್ರಪಂಚದಲ್ಲಿಯೇ ಅತೀ ದೊಡ್ಡ ಕಂಪನಿಗಳಾದ ಮೈಕ್ರೋಸಾಫ್ಟ್, ಅಮೇಜಾನ್ ರೀತಿಯ ಸಂಸ್ಥೆಗಳಿಗೆ ನಿಮ್ಮ ಡೇಟಾ ನೀಡಲಾಗುತ್ತಿದೆ. ನಮ್ಮ ಖಾತೆಯಲ್ಲಿ ನಾವು ಇನ್ನೊಬ್ಬರಿಗೆ ಕಳಿಸುವ ಮೆಸೇಜ್, ಹಾಗೂ ಸಂಪರ್ಕ ಪಡೆಯಲು ಕಂಪನಿಗಳಿಗೆ ಅನುಮತಿ ನೀಡಿದೆ ಎಂದು ಫೇಸ್ಬುಕ್ ಸಂಸ್ಥೆಯ ಆಂತರಿಕ ಮೂಲಗಳು ತಿಳಿಸಿವೆ ಎಂದು ವರದಿ ಮಾಡಲಾಗಿದೆ.
ಈ ಹಿಂದೆ ನಾವು ಎಷ್ಟೇ ಎಚ್ಚರ ವಹಿಸಿದರೂ ಫೇಸ್ಬುಕ್ ಬಳಕೆದಾರರ ಡಾಟಾ ಕಳವು, ಖಾತೆಗಳನ್ನು ಹ್ಯಾಕ್ ಮಾಡೋದು ನಿಲ್ಲುತ್ತಿಲ್ಲ. ಇದಕ್ಕೆ ಪುಷ್ಠಿ ನೀಡುವಂತೆ 50 ಮಿಲಿಯನ್ಗೂ ಹೆಚ್ಚು ಖಾತೆಗಳಿಗೆ ಸೇಫ್ ಇಲ್ಲದೆ ಹ್ಯಾಕ್ ಆಗಿವೆ ಎಂದು ಫೇಸ್ಬುಕ್ ಸಂಸ್ಥೆಯೇ ಅಧಿಕೃತ ಮಾಹಿತಿ ನೀಡಿತ್ತು. ಅಲ್ಲದೇ ಫೇಸ್ಬುಕ್ಕಿನಲ್ಲಿ ‘ವೀವ್ ಆ್ಯಸ್’(View As) ಎಂಬ ಆಪ್ಷನ್ ಇದೆ. ಈ ಆಪ್ಷನ್ ಬಳಸಿ ಟೋಕನ್ ನಂಬರ್ ಕದಿಯುವ ಮೂಲಕ ಖಾತೆಗಳನ್ನು ಹ್ಯಾಕ್ ಮಾಡಬಹುದು. ವೀವ್ ಆ್ಯಸ್ ಎಂಬ ಆಪ್ಷನ್ ಬಳಕೆದಾರರ ಉಪಯೋಗಕ್ಕಾಗಿ ಇರುವಂತದ್ದು. ಆದರೆ, ಇಲ್ಲಿ ಈ ಆಪ್ಷನ್ನಿಂದ ಉಪಯೋಗಕ್ಕಿಂತ ಫೇಸ್ಬುಕ್ ಬಳಕೆದಾರರ ಖಾತೆಗಳು ಹ್ಯಾಕ್ ಆಗುತ್ತಿವೆ. ಅಲ್ಲದೇ ಹ್ಯಾಕರ್ಸ್ಗೆ ಡೇಟಾ ಕದಿಯಲು ಸಹಾಯವಾಗುತ್ತಿದೆ ಎಂದು ಸಂಸ್ಥೆಯೇ ತಿಳಿಸಿತ್ತು.
ಹೀಗಾಗಿ ನಾವು ಫೇಸ್ಬುಕ್ ಖಾತೆಯನ್ನು ಯಾರು ಹ್ಯಾಕ್ ಮಾಡುತ್ತಿದ್ಧಾರೆ ಎಂದು ಶೋಧಿಸುತ್ತಿದ್ದೇವೆ. 90 ಮಿಲಿಯನ್ಗೂ ಹೆಚ್ಚು ಮಂದಿ ವೀವ್ ಆ್ಯಸ್ ಎಂಬ ಆಪ್ಷನ್ ಬಳಸುತ್ತಿದ್ದಾರೆ. ಇದರಲ್ಲಿ ಸುಮಾರು 50 ಮಿಲಿಯನ್ ಖಾತೆಗಳು ಹ್ಯಾಕಿಂಗ್ ಸಮಸ್ಯೆಗೆ ಒಳಗಾಗಿವೆ. ನಾವು ಸದ್ಯದಲ್ಲೇ ಸಮಸ್ಯೆಗೆ ಪರಿಹಾರ ಕಂಡುಹಿಡಿಯುತ್ತೇವೆ ಎಂದು ಸಂಸ್ಥೆ ಭರವಸೆ ನೀಡಿತ್ತು. ಆದರೀಗ ಭರವಸೆ ನೀಡಿದ್ದ ಫೇಸ್ಬುಕ್ ಸಂಸ್ಥೆಯೇ ಡಾಟ ಮಾರಾಟ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಏನೇ ಆಗಲೀ, ನೀವು ಯಾವುದೇ ಖಾಸಗಿ ಸಂದೇಶಗಳನ್ನು ಕಳಿಸುವ ಮುನ್ನ ಎಚ್ಚರವಹಸಿ ಎಂಬುದಷ್ಟೇ ನಮ್ಮ ಆಶಯ.
Comments are closed.