ಲಕ್ನೋ: ಬುಲಂದ್ ಶಹರ್ ನ ಸಿಯಾನಾ ಹಿಂಸಾಚಾರ ಪ್ರಕರಣದ ಪ್ರಧಾನ ಆರೋಪಿ ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್ ಅಗರ್ ವಾಲ್ ಅವರನ್ನು ಪೊಲೀಸರು ಹರ್ ಪುರ್ ನಲ್ಲಿ ಬಂಧಿಸಿದ್ದಾರೆ.
ಬುಲಂದ್ ಶಹರ್ ಹಿಂಸಾಚಾರ ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಸಿಂಗ್ ಅವರ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಶಿಖರ್ ಪ್ರಮುಖನಾಗಿದ್ದಾನೆ.
ಗೋಹತ್ಯೆಗೆ ಸಂಬಂಧಿಸಿದಂತೆ ಬುಲಂದ್ ಶಹರ್ ನಲ್ಲಿ ಕಳೆದ ವರ್ಷದ ಡಿಸೆಂಬರ್ 3ರಂದು ನಡೆದಿದ್ದ ಹಿಂಸಾಚಾರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸುಬೋಧ್ ಸಿಂಗ್ ಅವರನ್ನು ಕೊಲ್ಲಲಾಗಿತ್ತು, ಇದಕ್ಕೆ ಶಿಖರ್ ಅಗರ್ ವಾಲ್ ಕುಮ್ಮಕ್ಕು ನೀಡಿದ್ದ ಎನ್ನಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೂನ್ ಮತ್ತು ಪ್ರಶಾಂತ್ ನಾಥ್ ಎಂಬುವರನ್ನು ಬಂಧಿಸಲಾಗಿತ್ತು,ಗಲಭೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಮುಂದಾದ ಸುಬೋಧ್ ಅವರಿಗೆ ಕಲ್ಲು ತೂರಾಟ ನಡೆಸಲಾಗಿತ್ತು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅವರನ್ನು ಹಿಂಬಾಲಿಸಿದ ಗಲಭೆಕೋರರು ಅವರಿಗೆ ಶೂಟ್ ಮಾಡಿದ್ದರು.
ಕಳೆದವಾರ ಪ್ರಕರಣದ ಪ್ರಮುಕ ಆರೋಪಿ ಯೋಗೇಶ್ ರಾಜ್ ಎಂಬಾತನನ್ನು ಬಂಧಿಸಲಾಗಿತ್ತು, ದೆಹಲಿಯಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ, ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗೆ ಗುಂಜು ಹಾರಿಸಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದ.
Comments are closed.