ರಾಷ್ಟ್ರೀಯ

ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು ಜಿಎಸ್‏ಟಿ ವಿನಾಯ್ತಿ ಮಿತಿ ದುಪ್ಪಟ್ಟು

Pinterest LinkedIn Tumblr

ನವದೆಹಲಿ: ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ. ಇಂದು (ಗುರುವಾರ) ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ತೆರಿಗೆ ವಿನಾಯಿತಿ ಮಿತಿಯನ್ನು ದ್ವಿಗುಣಗೊಳಿಸಿದೆ.

ಜಿಎಸ್ಟಿ ಕೌನ್ಸಿಲ್ ಜಿಎಸ್ಟಿ ವಿನಾಯಿತಿ ಮಿತಿಯನ್ನು ಈಶಾನ್ಯ ರಾಜ್ಯಗಳಿಗೆ ರೂ. 20 ಲಕ್ಷ ಮತ್ತು ದೇಶದ ಉಳಿದ ಭ್ಆಗಗಳಿಗೆ 40 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಣ್ಣ ವ್ಯಾಪಾರಿಗಳು ವಹಾರಗಳು ಮೌಲ್ಯದ ಸೇರ್ಪಡೆಗೆ ಬದಲಾಗಿ ವಹಿವಾಟಿನ ಆಧಾರದ ಮೇಲೆ ತೆರಿಗೆ ಪಾವತಿಸುವ ಅವಕಾಶ ಮಾಡಿಕೊಡಲಾಗಿದ್ದು ಜಿಎಸ್ಟಿ ಸಂಯೋಜನೆ ವ್ಯಾಪ್ತಿಯನ್ನು ಈಗಿನ 1ಕೋಟಿಯಿಂದ 1.5 ಕೋಟಿ ರೂ.ಗೆ ಏರಿಸಲಾಯಿತು.

ಈ ತೀರ್ಮಾನದಿಂಡ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಕೇರಳದಲ್ಲಿ ಉಂಟಾದ ಭೀಕರ ಪ್ರವಾಹದ ಕಾರಣ ಸಾಕಷ್ಟು ನಷ್ಟವುಂಟಾಗಿದ್ದು ಈ ಬಗ್ಗೆ ಚರ್ಚಿಸಿದ ಕೌನ್ಸಿಲ್ ಕೇರಳ ವ್ಯವಹರಿಸುವ ಅಂತರಾಜ್ಯ ವಹಿವಾಟಿಗೆ ಸಂಬಂಧಿಸಿ ಕಟ್ಟಬೇಕಾಗಿದ್ದ ಸೆಸ್ ಅನ್ನು ಒಂದು ವರ್ಷದಿಂದ ಎರಡು ವರ್ಷಗಳಿಗೆ ರದ್ದು ಮಾಡಿದೆ.

ಸರಕು ಮತ್ತು ಸೇವೆ ತೆರಿಗೆಗಳ ಅಡಿಯಲ್ಲಿ ರಿಯಲ್ ಎಸ್ಟೇಟ್ ಮತ್ತು ಲಾಟರಿ ಸೇರಿದಂತೆ,ವಿವಿಧ ಸೇವೆಗಳ ಸೇರ್ಪಡೆ ಕುರಿತು ಒಮ್ಮತಾಭಿಪ್ರಾಯ ಮೂಡುವುದು ಸಾಧ್ಯವಾಗದ ಕಾರಣ ಏಳು ಮಂದಿ ಸದಸ್ಯರ ವಿಶೇಷ ಸಮಿತಿಯೊಂಡನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

Comments are closed.