ರಾಷ್ಟ್ರೀಯ

ಸಂಕ್ರಾಂತಿಗೆ ಹೊಸ ಫೋನ್‌ಗಳು! ಯಾವುದಿದೆ? ಯಾವುದಿಲ್ಲ?

Pinterest LinkedIn Tumblr


Samsung Galaxy F, S10:
ತಂತ್ರಜ್ಞಾನ ವಲಯದ ಎಲ್ಲರೂ ನಿರೀಕ್ಷಿಸುತ್ತಿರುವ ಒಂದು ಫೋನ್‌ Samsung Galaxy F. Samsung ಕಂಪನಿ ಮಡಚುವ ಫೋನ್‌ ಅನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ ತಕ್ಷಣದಿಂದಲೇ ಕುತೂಹಲ ಹುಟ್ಟಿಕೊಂಡಿದೆ. ಆ ಫೋನ್‌ಗೆ ಸದ್ಯಕ್ಕೆ Galaxy F ಎಂಬ ಹೆಸರು ಇಡಲಾಗಿದೆ. ಇದು ಫೋಲ್ಡ್‌ ಆಗದಿದ್ದಾಗ 7.3 ಹಾಗೂ ಫೋಲ್ಡ್‌ ಮಾಡಿದಾಗ 4.6 ಇಂಚಸ್‌ ಡಿಸ್‌ಪ್ಲೇನಲ್ಲಿ ನೋಡಬಹುದಾಗಿದೆ. ಅದರ ಜೊತೆಗೆ Samsungನ ಯಶಸ್ವೀ ಸರಣಿಯ Galaxy S10, Galaxy S10 Plus ನಿರೀಕ್ಷಿಸಬಹುದು.

Honor View 20:

48 ಮೆಗಾ ಪಿಕ್ಸೆಲ್‌ ರೇರ್‌ ಕ್ಯಾಮೆರಾ ಹೊಂದಿರುವ ಹುವೈ ಸಂಸ್ಥೆಯ ಬಹು ನಿರೀಕ್ಷಿತ ಫೋನ್‌ Honor View 20 ಈ ವರ್ಷ ಬರಲಿದೆ. ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ.

iPhone 11:

iPhone 10, iPhone X ಸೀರೀಸಿನ ಮೊಬೈಲ್‌ಗಳು ಜನರ ಕೈ ತಲುಪಿವೆ. iPhone ಹೊಸತೇನಾದರೂ ನೀಡಲು ತಯಾರಿ ಮಾಡಿಕೊಂಡಿದೆ. ಅದರ ಮುಂದಿನ ಕೊಡುಗೆಯೇ iPhone 11. ಇದಲ್ಲದೇ ಮುಂದಿನ ವರ್ಷದಲ್ಲಿ 3D iPhoneಗಳು ಬರುವ ಸಾಧ್ಯತೆಗಳಿವೆ. 3D ಟಚ್‌ನೊಂದಿಗೆ ಕ್ಯಾಮೆರಾಗಳು ಸಹ ಡ್ಯುಯಲ್‌ ಲೆನ್ಸ್‌ ಇರಲಿದೆ. Apple ಕಂಪನಿ ಎರಡು ವರ್ಷದ ನಂತರ ವಿನ್ಯಾಸವನ್ನು ಬದಲಾಯಿಸಲಿದ್ದು, iPhone X ಲುಕ್‌ನಂತೆ ಬರಬಹುದು. ಜೊತೆಗೆ Sony ಕಂಪನಿಯಿಂದ 3ಡಿ ಕ್ಯಾಮೆರಾ ಬಳಸಿಕೊಳ್ಳಲು ಯೋಚಿಸಿದೆ ಎನ್ನಲಾಗಿದೆ.

Pixel 3 Lite:

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ Pixel ಕೂಡ ಒಂದು. ಹಾಗಾಗಿ ಈ ವರ್ಷ Pixel 3 ಮತ್ತು 3XLನ್ನು ಪರಿಚಯಿಸಲಿದೆ. ಇದರಲ್ಲಿ ಸ್ನ್ಯಾಪ್‌ಡ್ರ್ಯಾಗನ್‌ನ 670 ಪವರ್‌, 5.5 ಇಂಚಿನ ಎಲ್‌ಸಿಡಿ ಟೊಟಿಂಗ್‌ ಪಿಕ್ಸೆಲ್‌, 4 ಜಿಬಿ RAM ಇದರಲ್ಲಿರಲಿದೆ. ಇದು 32 ಜಿಬಿ ಇಂಟರ್‌ನಲ್‌ ಮೆಮೊರಿ ಹಾಗೂ Pixel 3ನಂತೆ ಬ್ಯಾಟರಿ ಸಾಮರ್ಥ್ಯ ಇರಲಿದೆ.

Xiaomi mi mix 3:

ಸ್ಲಿಮ್‌ ಹಾಗೂ ಸ್ಮಾರ್ಟ್‌ ಲುಕಿಂಗ್‌ಗೆ ಹೆಸರಾದ Xiaomi ಈ ವರ್ಷ mi mix 3 ಎಂಬ ಮೂರನೇ ವರ್ಷನ್‌ ಅನ್ನು ತರುವ ನಿರೀಕ್ಷೆ ಇದೆ. ಇದರಲ್ಲಿ Oppoನ ಫಿಂಡ್‌ ಎಕ್ಸ್‌ನ ಫ್ರಂಟ್‌ ಕ್ಯಾಮೆರಾದಂತೆ mi mix 3ನಲ್ಲೂ ಕಾಣಬಹುದು. ಜೊತೆಗೆ 10ಜಿಬಿ ರಾರ‍ಯಮ್‌, 5ಜಿ ಸಪೋರ್ಟಿವ್‌ ನೆಟ್ವರ್ಕ್ ಇದರಲ್ಲಿ ಕಾಣಬಹುದಾಗಿದೆ. ಈಗಾಗಲೇ ಚೀನಾದ ಗ್ರಾಹಕರ ಕೈಸೇರಲು ಪ್ರಾರಂಭವಾಗಿದೆ ಎನ್ನಲಾಗಿದೆ.

LG/ Sprint 5G ಫೋನ್‌:

5G ಸಾಮರ್ಥ್ಯದ LG ಮತ್ತು Sprint ಸ್ಮಾರ್ಟ್‌ಫೋನ್‌ ಈ ವರ್ಷದ ಮೊದಲಾರ್ಧದಲ್ಲೇ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ. ಇದು 5G ನೆಟ್ವರ್ಕ್‌ಗೆ ಸಪೋರ್ಟಿವ್‌ ಆಗಿದ್ದು, ಕೇವಲ ಒಂಭತ್ತು ನಗರಗಳಲ್ಲಿ 5G ವರ್ಕ್ ಆಗಲಿದೆ. ಇವೆರಡಲ್ಲಿ Sprint ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಸ್ಮಾರ್ಟ್‌ ಡಿಸೈನ್‌, ಸ್ಟೈಲಿಷ್‌, ಹಲವಾರು ಫೀಚರ್ಸ್ ಹಾಗೂ ಹಲವು ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ. ಒಟ್ಟಿನಲ್ಲಿ ಈ ವರ್ಷ 5G ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ. ಜತೆಗೆ ಫೋಲ್ಡೆಬಲ್‌ ಮೊಬೈಲ್‌ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.

Comments are closed.